ಉತ್ತಮ ಗುಣಮಟ್ಟದ ಎರೆಹುಳು ಗೊಬ್ಬರ
ಎರೆಹುಳುಗಳು ಹಾಕುವ ಹಿಕ್ಕೆಯೇ ಎರೆಹುಳು ಗೊಬ್ಬರ. ಉತ್ತಮ ಗುಣಮಟ್ಟದ ಕಲಬೆರಕೆ ಇಲ್ಲದ ಸಗಣಿಯೇ ಎರೆಹುಳುಗಳಿಗೆ ಆಹಾರ. ಎರೆಹುಳುಗಳು ಎಲ್ಲಾ ರೀತಿಯ ಕೊಳೆತ (ಸಾವಯವ) ವಸ್ತುಗಳನ್ನು ಸೇವಿಸುತ್ತಾವೆಯಾದರೂ ಸಗಣಿಯನ್ನು ತಿಂದು ಹಿಕ್ಕೆ ಹಾಕಿದಾಗ ಆ ಎರೆಗೊಬ್ಬರದ ಗುಣಮಟ್ಟವು ಅತ್ಯಂತ ಗರಿಷ್ಠವಾಗಿರುತ್ತದೆ ಮತ್ತು ಅದರಲ್ಲಿ ಪೋಷಕಾಂಶಗಳು ಲಘು-ಪೋಷಕಾಂಶಗಳು, ಸಸ್ಯವರ್ಧಕ ಕಿಣ್ವಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಆದ್ದರಿಂದ ‘ಸಿರಿಕಮಲ’ ಇಂಡಸ್ಟ್ರಿಯಲ್ಲಿ ಎರೆಹುಳುಗಳಿಗೆ ಉತ್ತಮ ಗುಣಮಟ್ಟದ ಸಗಣಿಯನ್ನೇ ಆಹಾರವಾಗಿ ನೀಡಲಾಗುತ್ತದೆ. ಹಾಗಾಗಿ ಬೇರೆ ಬೇರೆ ಕಡೆ ತಯಾರಿಸುವ ಎರೆಹುಳು ಗೊಬ್ಬರಕ್ಕಿಂತ ಇಲ್ಲಿ ತಯಾರಿಸುವ ಎರೆಗೊಬ್ಬರದ ಗುಣಮಟ್ಟ ಸಹಜವಾಗಿಯೇ ಇನ್ನೂ ಉತ್ತಮವಾಗಿದೆ. ಬೇರೆ ಬೇರೆ ವಿಧಾನಗಳಿಂದ ಕಾಂಪೋಸ್ಟ್ ಮಾಡಲ್ಪಟ್ಟ ಕಾಂಪೋಸ್ಟ್ ಗೊಬ್ಬರಗಳಿಗಿಂತಲೂ ಎರೆಗೊಬ್ಬರದಲ್ಲಿ ಪೋಷಕಾಂಶಗಳು ಗರಿಷ್ಠವಾಗಿರುತ್ತವೆ ಎಂಬುದು ಪ್ರಯೋಗಗಳಿಂದ ದೃಢಪಟ್ಟಿದೆ. ಅಲಭ್ಯ ಸ್ವರೂಪದ ಪೋಷಕಾಂಶಗಳನ್ನು ಲಭ್ಯ ಸ್ವರೂಪಕ್ಕೆ ಪರಿವರ್ತಿಸುವ ಸೂಕ್ಷ್ಮ ಜೀವಿಗಳ ಚಟುವಟಿಕೆ ಮತ್ತು ಆಯಸ್ಸು ಮಣ್ಣು ಅಥವಾ ಬೇರೆ ಸಾವಯವ ವಸ್ತುಗಳಿಗಿಂತಲೂ ಎರೆಗೊಬ್ಬರದಲ್ಲಿ 10 ರಿಂದ 20 ಪಟ್ಟು ಹೆಚ್ಚಿಗೆ ಇರುತ್ತದೆ. ಎರೆ ಗೊಬ್ಬರವು ಮಣ್ಣಿನ ನೀರು ಹಿಡಿದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮೊಳಕೆ ಒಡೆಯುವುದು, ಗಿಡಗಳ ಬೆಳವಣಿಗೆ ಬೇರುಗಳ ರಚನೆ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಗಿಡಗಳ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಯಾವುದೇ ಭೂಮಿಯಲ್ಲಿ ಎರೆಹುಳುಗಳ ಸಂಖ್ಯೆ ಹೆಚ್ಚಾದರೆ ತನ್ನಿಂದತಾನೇ ಹೆಚ್ಚು ಫಲವತ್ತಾಗುತ್ತದೆ, ಇದು ಇತಿಹಾಸ ಹೇಳುತ್ತಿರುವ ಸತ್ಯ ಅದಕ್ಕೆ ಪುರಾತನ ಕಾಲದಿಂದಲೂ ಎರೆಹುಳು ರೈತನ ಮಿತ್ರ ಎಂದು ಹೇಳಿರುವುದು.
ಎರೆಹುಳುಗಳಿಗೆ ತಿನ್ನಿಸಲು ತಂದಿರುವ ಉತ್ತಮ ಗುಣಮಟ್ಟದ ಸಗಣಿ
ಈ ಗೊಬ್ಬರ ಬಳಕೆಯಿಂದ ರೈತರಿಗೆ ಮಾನಸಿಕ ತೃಪ್ತಿ
ಇಂದು ಮಾರುಕಟ್ಟೆಯಲ್ಲಿರುವ ಬಹುತೇಕ ಸಾವಯವ ಗೊಬ್ಬರಗಳ ಮೂಲವಸ್ತು ಯಾವುದಾದರೂ ಕೈಗಾರಿಕಾ ತ್ಯಾಜ್ಯ ಅಥವಾ ಕೈಗಾರಿಕಾ ಉಪಉತ್ಪನ್ನಗಳೇ ಆಗಿವೆ. ಅಥವಾ ನಗರ ತ್ಯಾಜ್ಯ ಆಗಿವೆ. ಇದನ್ನು ಬಹುತೇಕ ರೈತರು ಇಷ್ಟಪಡುತ್ತಿಲ್ಲ. ಕಾರಣ ರೈತಾಪಿ ಜನರು ಪುರಾತನ ಕಾಲದಿಂದಲೂ ಸಹ ಗೊಬ್ಬರವಾಗಿ ಬಳಸುತ್ತಿದ್ದುದು ಹಸುವಿನ ಮತ್ತು ಎಮ್ಮೆಯ ಸೆಗಣಿಯನ್ನು ಮಾತ್ರ ಆದರೆ ಇಂದು ದುಬಾರಿ ಕೂಲಿ ಮತ್ತು ಕೂಲಿಕಾರರ ಕೊರತೆಯಿಂದ ಸಗಣಿಗೊಬ್ಬರವನ್ನು ತೋಟಕ್ಕೆ ಒದಗಿಸುವುದು ತುಂಬಾ ದುಸ್ತರವಾಗುತ್ತಿದೆ. ಹಾಗೆಂದು ಅದಕ್ಕೆ ಬದಲಿಯಾಗಿ ಕೈಗಾರಿಕಾ ತ್ಯಾಜ್ಯದ ಆಧಾರಿತ ಸಾವಯವ ಗೊಬ್ಬರ ಬಳಸಲು ರೈತರು ಮಾನಸಿಕವಾಗಿ ಸಿದ್ಧರಿಲ್ಲ. ಅದು ಅವರ ಮನಸ್ಸಿಗೆ ಸಮಾಧಾನ ಉಂಟುಮಾಡುತ್ತಿಲ್ಲ.
ಇದಕ್ಕೆ ಭಿನ್ನವಾಗಿ ಸಿರಿಕಮಲ ಬಯೋ ಆರ್ಗಾನಿಕ್ ಇಂಡಸ್ಟ್ರೀಸ್ನಿಂದ ತಯಾರಿಸಲ್ಪಡುವ ಸಾವಯವ ಗೊಬ್ಬರಗಳು ಈ ವಿಷಯದಲ್ಲಿ ರೈತರಿಗೆ ಮಾನಸಿಕವಾಗಿ ಸಮಾಧಾನ ಮತ್ತು ತೃಪ್ತಿ ಹೊಂದಲು ಕಾರಣವಾಗಿದೆ. ಏಕೆಂದರೆ ಇಲ್ಲಿ ತಯಾರಿಸುವ ಸಾವಯವ ಗೊಬ್ಬರಗಳ ಮೂಲವಸ್ತು ಕೈಗಾರಿಕಾ ತ್ಯಾಜ್ಯಗಳಲ್ಲ. ಬದಲಾಗಿ ಸಗಣಿಯಿಂದಲೇ ತಯಾರಿಸಲ್ಪಡುವ ಅಥವಾ ಸಗಣಿಯ ಇನ್ನೊಂದು ರೂಪವೇ ಆಗಿರುವ ಎರೆಹುಳು ಗೊಬ್ಬರ. ಇದು ರೈತರ ಸಮಾಧಾನ ಮತ್ತು ತೃಪ್ತಿಗೆ ಕಾರಣವಾಗಿದೆ. ಸಾಂಪ್ರದಾಯಿಕ ಕೃಷಿ ಪದ್ಧತಿಗೆ ತಿಲಾಂಜಲಿ ಕೊಟ್ಟಂತೆಯೂ ಆಗುವುದಿಲ್ಲ ಮತ್ತು ತೋಟಕ್ಕೆ ಗೊಬ್ಬರ ನೀಡುವ ದಾಂಧಲೆ ಹಾಗೂ ಕೂಲಿಕಾರರ ಅಭಾವದ ಬಿಸಿಯೂ ಬಾಧಿಸುವುದಿಲ್ಲ. ಖರ್ಚಿನ ದೃಷ್ಟಿಯಿಂದ ಸಹ ಸಗಣಿಗೊಬ್ಬರಕ್ಕಿಂತ ದುಬಾರಿಯಾಗುವುದಿಲ್ಲ. ಹಾಗಾಗಿ ಎರೆಹುಳು ಗೊಬ್ಬರ ಆಧಾರಿತ ಈ ಸಾವಯವ ಗೊಬ್ಬರಗಳು ರೈತರಿಗೆ ಒಂದು ವರದಾನವಾಗಿದೆ ಮತ್ತು ಇವು ಬುದ್ದಿವಂತ ರೈತರ ಆಯ್ಕೆಯಾಗಿದೆ.
ತೋಟದಲ್ಲಿ ಎರೆಹುಳುಗಳ ಸಂಖ್ಯೆ ತನ್ನಿಂದ ತಾನೇ ಹೆಚ್ಚಾಗುತ್ತದೆ.
ಇಲ್ಲಿ ಮಾರುವ ಗೊಬ್ಬರಗಳಲ್ಲಿ ಎರೆಹುಳುವಿನ ಮರಿ ಮತ್ತು ಮೊಟ್ಟೆಗಳು ಇರುತ್ತವೆ. ಗೊಬ್ಬರಹಾಕಿದಾಗ ತೋಟದಲ್ಲಿಯೇ ಅವು ಬೆಳೆದು ಅವುಗಳ ಸಂಖ್ಯೆ ಹೆಚ್ಚಾಗುತ್ತದೆ. ಬೇರೆ ಯಾವುದೇ ಸಾವಯವ ಗೊಬ್ಬರಗಳಿಂದ ಸಿಗದ ಈ ಉಪಯೋಗ ಎರೆ ಗೊಬ್ಬರದಿಂದ ರೈತರಿಗೆ ಲಭ್ಯವಾಗುತ್ತದೆ.
ಸಗಣಿಯನ್ನು ಎರೆಹುಳು ಬೆಡ್ಗೆ ಹಾಕುತ್ತಿರುವುದು
ಉತ್ತಮ ಸಗಣಿ ತಿನ್ನಿಸಿ ಎರೆ ಗೊಬ್ಬರ ತಯಾರಿಸುತ್ತಿರುವುದು, ಮಿಶ್ರಣ ಮಾಡಿ ಚೀಲ ತುಂಬುತ್ತಿರುವುದು
ಸಿರಿಕಮಲ ಬಯೋಆರ್ಗಾನಿಕ್ ಇಂಡಸ್ಟ್ರೀಸ್ನಲ್ಲಿ ತಯಾರಿಸುವ ಸಾವಯವ ಗೊಬ್ಬರಗಳಲ್ಲಿ ಬಳಸುವ ಒಂದು ಪ್ರಮುಖ ವಸ್ತು ಕುರಿಗೊಬ್ಬರ, ಇಂದು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಕುರಿಗೊಬ್ಬರಗಳು ಲಭ್ಯವಿದೆ. ಬಹುತೇಕ ಕುರಿಗೊಬ್ಬರಗಳು ಮಣ್ಣು ಮಿಶ್ರಿತ ಮತ್ತು ಹುಲ್ಲು, ಕಸಮಿಶ್ರಿತ ಕುರಿಗೊಬ್ಬರಗಳಾಗಿವೆ. ತುಂಬಾ ಒಣಗಿ ಗಟ್ಟಿಯಾದ ಸ್ಥಿತಿಯಲ್ಲಿರುತ್ತವೆ. ಲಾರಿಗಳಲ್ಲಿ, ಟ್ರಾಕ್ಟರ್ಗಳಲ್ಲಿ ಪೂರೈಸಲಾಗುತ್ತದೆ. ಆದರೆ ಸಿರಿಕಮಲ ಇಂಡಸ್ಟ್ರಿಯಲ್ಲಿ ಉಪಯೋಗಿಸುವ ಕುರಿಗೊಬ್ಬರ ಮಾತ್ರ ತುಂಬಾ ಉತ್ತಮ ಗುಣಮಟ್ಟದ್ದಾಗಿದೆ. ಕುರಿದೊಡ್ಡಿಯ ಹೊರಗೆ ತಿಪ್ಪೆಗೆ ಹಾಕಿರುವ ಮಣ್ಣು, ಕಸ ಮಿಶ್ರಿತವಾಗಿರುವ ಕುರಿಗೊಬ್ಬರವನ್ನು ಇಲ್ಲಿ ತರಲಾಗುವುದಿಲ್ಲ. ಬದಲಾಗಿ ಕುರಿ ಕಟ್ಟುವ ಅಟ್ಟದಿಂದಲೇ ನೇರವಾಗಿ ಸಂಗ್ರಹಿಸಿ ತಂದು ಅದನ್ನು ಫ್ಯಾಕ್ಟರಿಯಲ್ಲಿ ನೆರಳಿನಲ್ಲಿಯೇ ಇಟ್ಟುಕೊಳ್ಳಲಾಗುತ್ತದೆ. ಇದರಲ್ಲಿ ಮಣ್ಣು, ಕಸ ಇರುವುದಿಲ್ಲ. ಕುರಿಹಿಕ್ಕೆ ಮತ್ತು ಕುರಿಯ ಮೂತ್ರ ಮಾತ್ರ ಇರುತ್ತದೆ. ಇದು ಸ್ವಲ್ಪ ದುಬಾರಿಯಾದರೂ ಸಹ ಈ ಕುರಿಗೊಬ್ಬರದ ಫಲಿತಾಂಶ ಗರಿಷ್ಠವಾಗಿರುತ್ತದೆ.
ಕುರಿ ಕಟ್ಟುವ ಅಟ್ಟ, ಅಟ್ಟದ ದಬ್ಬೆ ತೆಗೆಯುತ್ತಿರುವುದು, ಕುರಿ ಗೊಬ್ಬರ ತುಂಬುತ್ತಿರುವುದು
ಪರ್ಯಾಯ ಗೊಬ್ಬರವಾಗಿ ಸಾಬೀತಾಗಿದೆ.
‘ಸಿರಿಕಮಲ’ದಲ್ಲಿ ತಯಾರಿಸಲಾಗುವ ಸಾವಯವ ಗೊಬ್ಬರಗಳನ್ನು ಸಗಣಿ ಗೊಬ್ಬರಕ್ಕೆ ಬದಲಿಯಾಗಿ, ಪರ್ಯಾಯವಾಗಿ ಬಳಸಬಹುದೆಂದು ದೀರ್ಘಕಾಲಿಕ ಪ್ರಯೋಗ, ಪ್ರಾತ್ಯಕ್ಷಿಕೆಗಳಿಂದ ಸಾಬೀತಾಗಿದೆ. ಇಂದು ಮಾರುಕಟ್ಟೆಯಲ್ಲಿರುವ ಬಹುತೇಕ ಸಾವಯವ ಗೊಬ್ಬರಗಳು ಒಂದೋ ಅದನ್ನು ಸಗಣಿಗೊಬ್ಬರದ ಜೊತೆಗೆ ಕೊಡಲು ಶಿಫಾರಸ್ಸು ಮಾಡಲಾಗುತ್ತದೆ ಅಥವಾ ಅದರ ಜೊತೆ ರಾಸಾಯನಿಕ ಗೊಬ್ಬರ ಕೊಡಲು ಶಿಫಾರಸ್ಸು ಮಾಡಲಾಗುತ್ತದೆ. ಇನ್ನೂ ಕೆಲವು ಕಂಪನಿಗಳವರು ಪರ್ಯಾಯವಾಗಿ ಬಳಸಲು ಶಿಫಾರಸ್ಸು ಮಾಡುತ್ತಾರಾದರೂ ಅವುಗಳನ್ನು ದೀರ್ಘಕಾಲದ ಪ್ರಯೋಗಕ್ಕೆ ಒಳಪಡಿಸಿಯೇ ಇರುವುದಿಲ್ಲ. ಕಾರಣ ಅಂತಹ ಸಾವಯವ ಗೊಬ್ಬರಗಳ ಕಂಪನಿಗಳು ಪ್ರಾರಂಭವಾಗಿಯೇ ಇನ್ನೂ ಎರಡು ಮೂರು ವರ್ಷಗಳೂ ಕಳೆದಿರುವುದಿಲ್ಲ. ಆದರೆ ಸಿರಿಕಮಲ ಸಂಸ್ಥೆಯಿಂದ ತಯಾರಿಸಲ್ಪಡುವ ಗೊಬ್ಬರಗಳನ್ನು 8 ವರ್ಷ, 10 ವರ್ಷ, 15 ವರ್ಷಗಳಿಗಿಂತಲೂ ದೀರ್ಘ ಕಾಲ ನಿರಂತರವಾಗಿ ಸಗಣಿ ಗೊಬ್ಬರಕ್ಕೆ ಬದಲಿಯಾಗಿ ಕೇವಲ ಅದೊಂದನ್ನೇ ಬಳಸಿದ ನೂರಾರು ರೈತರು ಇದ್ದಾರೆ. ನೂರಾರು ಪ್ರಾತ್ಯಕ್ಷಿಕೆಗಳಿವೆ. ಆ ಎಲ್ಲರ ತೋಟಗಳೇ ಇಂದು ಈ ಗೊಬ್ಬರಗಳು ಸಗಣಿಗೊಬ್ಬರಕ್ಕೆ ಮತ್ತು ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯ ಮತ್ತು ಸಗಣಿ ಗೊಬ್ಬರಕ್ಕಿಂತಲೂ ಉತ್ತಮ ಎಂಬುದನ್ನು ಸಾಬೀತುಪಡಿಸಿವೆ. ಸಾರಿ ಹೇಳುತ್ತಿವೆ ಮತ್ತು ಸಾಕ್ಷಿಗಳಾಗಿವೆ!!
ಸಿರಿಕಮಲದಲ್ಲಿ ತಯಾರಿಸುವ ಸಾವಯವ ಗೊಬ್ಬರಗಳಿಗೆ ಜೀವಾಮೃತವನ್ನು ಸೇರಿಸಲಾಗುತ್ತದೆ. ಇದೇ ಕಾರಣಕ್ಕಾಗಿ ಗೀರ್, ದೇವಣಿ, ಮಲೆನಾಡು ಗಿಡ್ಡ ಮೊದಲಾದ ಭಾರತೀಯ ತಳಿಯ ಗೋವುಗಳನ್ನು ಸಾಕಲಾಗಿದೆ. ಇವುಗಳ ಸಗಣಿ, ಗೋಮಾತ್ರಗಳೆಲ್ಲವೂ ಜೀವಾಮೃತವಾಗಿ ಪರಿವರ್ತನೆ ಹೊಂದಿ ಇಲ್ಲಿ ತಯಾರಿಸಲ್ಪಡುವ ಸಾವಯವ ಗೊಬ್ಬರಗಳಲ್ಲಿ ಸೇರಿಕೊಂಡು ರೈತರ ಅಡಿಕೆ ತೋಟಗಳಲ್ಲಿ ದ್ವಿಗುಣಗೊಳ್ಳುತ್ತವೆ.
ನಾಟಿ ಹಸುಗಳು : ಹಳ್ಳಿಕಾರ್, ದೇವಣಿ, ಗೀರ್, ಮಲೆನಾಡು ಗಿಡ್ಡ (ಭಾರತೀಯ ತಳಿ ಗೋವುಗಳು), ಘನ ಜೀವಾಮೃತ
ತೋಟಗಾರಿಕೆ ಇಲಾಖೆಯ ಮಾನ್ಯತೆ
ಸಂಸ್ಥೆ ತಯಾರಿಸುವ ಗೊಬ್ಬರಗಳು ವೈಜ್ಞಾನಿಕವಾಗಿವೆ ಮತ್ತು ಅಗತ್ಯ ಪ್ರಮಾಣದ ಪೋಷಕಾಂಶಗಳನ್ನು ಹೊಂದಿವೆ ಎಂದುದನ್ನು ಕರ್ನಾಟಕ ತೋಟಗಾರಿಕಾ ಜಂಟಿ ನಿರ್ದೇಶಕರ ಕಛೇರಿ ಹುಳಿಮಾವು ಬೆಂಗಳೂರು ಇಲ್ಲಿ ಲ್ಯಾಬ್ ಟೆಸ್ಟ್ ನಡೆಸಿ ಪ್ರಮಾಣಪತ್ರ ನೀಡಲಾಗಿದೆ ಮತ್ತು ಅವರಿಂದ ಮಾನ್ಯತೆ ಪಡೆಯಲಾಗಿದೆ. ಕೃಷಿ ಮತ್ತು ತೋಟಗಾರಿಕೆಯ ಸಹಾಯ ಧನದ ಂಗಳಲ್ಲಿ ಸಂಸ್ಥೆಯ ಗೊಬ್ಬರವನ್ನು ಬಳಸಬಹುದಾಗಿದೆ. ಲ್ಯಾಬ್ ಟೆಸ್ಟ್ ರಿಪೋರ್ಟ ಪುಟ 14ರಲ್ಲಿ ಕೊಡಲಾಗಿದೆ.
ಎರೆಜಲ ಎಂಬ ಅಚ್ಚರಿ
ಎರೆಹುಳುವಿನ ಮೂತ್ರ ಮತ್ತು ಅದರ ಮೈ ತೊಳೆದ ನೀರು. ಎರೆಜಲ. ಇದು ಗಿಡಗಳಿಗೆ ಅತ್ಯಂತ ಪೌಷ್ಠಿಕವಾದ ದ್ರವರೂಪದ ಗೊಬ್ಬರ, ಯಾವುದೇ ಬೆಳೆಗಳಿಗೆ ಸಿಂಪಡಣೆ ಮಾಡಬಹುದು. ತಕ್ಷಣದ ಪರಿಣಾಮ ಕಾಣಬಹುದು.
ಸಂಜೀವಿನಿ ಎರೆಜಲ
ಪಾರದರ್ಶಕತೆ
ಬಹುದೇಕ ಸಾವಯವ ಗೊಬ್ಬರ ಕೈಗಾರಿಕೆಗಳಲ್ಲಿ ಸಾಮಾನ್ಯ ಜನರಿಗೆ ಪ್ರವೇಶವಿರುವುದಿಲ್ಲ. ಆದರೆ ಇಲ್ಲಿ ಮಾತ್ರ ಎಲ್ಲರಿಗೂ ಮುಕ್ತ ಅವಕಾಶ, ರೈತರು ಸ್ವತಃ ಫ್ಯಾಕ್ಟರಿಗೆ ಬಂದು ಅಲ್ಲಿಯೇ ತಮ್ಮ ಕಣ್ಣೆದುರಿನಲ್ಲಿಯೇ ಗೊಬ್ಬರವನ್ನು ತಯಾರಿಸುವ ವಿಧಾನವನ್ನು ಪ್ರತ್ಯಕ್ಷವಾಗಿ ನೋಡಬಹುದಾಗಿದೆ ಮತ್ತು ಸ್ವತಃ ನಿಂತುಕೊಂಡು ಗೊಬ್ಬರವನ್ನು ಚೀಲಕ್ಕೆ ತುಂಬಿಸಿಕೊಂಡು ಹೋಗಬಹುದಾಗಿದೆ. ಇದು ಕಲಬೆರಕೆಯ ಈ ಯುಗದಲ್ಲಿ ರೈತರಿಗೆ ಹೆಚ್ಚಿನ ವಿಶ್ವಾಸ ಉಂಟಾಗಲು ಕಾರಣವಾಗಿದೆ ಮತ್ತು ಅವರು ಮೋಸಹೋಗುವುದನ್ನು ತಡೆಗಟ್ಟಲು ಸಾಧ್ಯವಾಗಿದೆ. ಯಾವ ಬ್ರಾಂಡ್ನಲ್ಲಿ ಯಾವ ವಸ್ತುಗಳನ್ನು ಎಷ್ಟು ಪ್ರಮಾಣದಲ್ಲಿ ಸೇರಿಸಲಾಗುವದೆಂಬುದನ್ನು ಮೊದಲೇ ಹೇಳಿ, ಅದೇ ಪ್ರಕಾರ ಮಿಶ್ರಣ ಮಾಡಿ ಕೊಡಲಾಗುವುದು.
ಸಂಪೂರ್ಣ ಸಾವಯವ
ಸಿರಿಕಮಲ ಸಂಸ್ಥೆಯಲ್ಲಿ ತಯಾರಾಗುವ ಎಲ್ಲಾ ಸಾವಯವ ಗೊಬ್ಬರಗಳೂ ಸಹ ಸಂಪೂರ್ಣ ಸಾವಯವ ಗೊಬ್ಬರಗಳಾಗಿವೆ. ಇವುಗಳಲ್ಲಿ ಯಾವುದೇ ರೀತಿಯ ಕೃತಕ ರಾಸಾಯನಿಕಗಳು ಅಥವಾ ರಾಸಾಯನಿಕ ಗೊಬ್ಬರಗಳ ಮಿಶ್ರಣವಿರುವುದಿಲ್ಲ. ಇದನ್ನು ಯಾರು ಬೇಕಾದರೂ ಸಹ ಪರೀಕ್ಷಿಸಬಹುದು. ಅದಕ್ಕೆ ಅವಕಾಶವಿದೆ. ಕಂಪನಿ ತಯಾರಿಸುವ ಗೊಬ್ಬರಗಳ ಪೈಕಿ ಕೆಲವು ಗೊಬ್ಬರಗಳಲ್ಲಿ ಸಕ್ಕರೆ ಕಾರ್ಖಾನೆಯ ಮಡ್ಡಿಯನ್ನು ಸ್ವಲ್ಪ ಪ್ರಮಾಣದಲ್ಲಿ (30) ಸೇರಿಸಲಾಗುತ್ತದೆ. ಅದನ್ನೂ ಸಹ ಯಾವುದೇ ರಾಸಾಯನಿಕಗಳನ್ನು ಸೇರಿಸದೆ ಕಾಂಪೋಸ್ಟ್ ಮಾಡಿ ನಂತರ ಗೊಬ್ಬರಕ್ಕೆ ಸೇರಿಸಲಾಗುತ್ತದೆ.
ಸಿರಿಕಮಲ ಸಂಸ್ಥೆ ತಯಾರಿಸುವ ಗೊಬ್ಬರಗಳಲ್ಲಿ ಉತ್ತಮ ಗುಣಮಟ್ಟದ ಬೇವಿನ ಬೀಜದ ಪುಡಿಗಳನ್ನು ನೇರವಾಗಿಯೇ ಯಥಾ ಸ್ಥಿತಿಯಲ್ಲಿಯೇ ಸೇರಿಸಲಾಗುತ್ತದೆ. ಗೊಬ್ಬರದಲ್ಲಿ ಆ ವಸ್ತುವನ್ನು ಸ್ಪಷ್ಟವಾಗಿ ಕಾಣಬಹುದು. ಸಂಸ್ಥೆಯ ಗೊಬ್ಬರ ಬಳಕೆಯಿಂದಲೇ ಅಯಾಚಿತವಾಗಿ ಬೇವಿನ ಪುಡಿಯನ್ನೂ ಸಹ ಮರಗಳಿಗೆ ನೀಡಿದಂತಾಗುತ್ತದೆ. ಬೇವಿನ ಹಿಂಡಿ ತೋಟಕ್ಕೆ ಹಾಕುವ ಯೋಚನೆ ಬರದಿದ್ದರೂ ಸಹ ಅವರಿಗರಿವಿಲ್ಲದಂತೆಯೇ ಬೇವಿನಹಿಂಡಿ ಮರಗಳಿಗೆ ನೀಡಲ್ಪಡುತ್ತದೆ. ಬೇವಿನ ಹಿಂಡಿಯ ವಿಷಯದಲ್ಲಿ ಅತೀ ಹೆಚ್ಚು ಕಲಬೆರಕೆಯ ಜಾಲದ ವ್ಯವಹಾರ ನಡೆಯುತ್ತಿದೆ. ಆದ್ದರಿಂದ ಬೇವಿನ ಹಿಂಡಿ ತಯಾರಿಸುವ ಮಿಲ್ಲುಗಳಿಂದ ಕಲಬೆರಕೆ ಇಲ್ಲದ ಬೇವಿನ ಬೀಜದ ಪುಡಿಯನ್ನು ಸ್ವತಃ ನಿಂತು ಮಾಡಿಸಿಕೊಂಡು ತರಲಾಗುತ್ತದೆ.
ಬೇವಿನ ಬೀಜಗಳಿಂದ ಅದರ ಪುಡಿ ತಯಾರಿಸುತ್ತಿರುವುದು
ಆಧುನಿಕತೆಯ ಲೇಪನ
ಆಧುನಿಕ ಕೃಷಿಯನ್ನು ಇಷ್ಟಪಡುವ ರೈತರಿಗೆ ಸಹ ತೃಪ್ತಿಕೊಡುವ ಅನೇಕ ಅಂಶಗಳು ಇವೆ. ಸುಮ್ಮನೇ ಹುಂಡಗುತ್ತಿಗೆಯಲ್ಲಿ ಗೊಬ್ಬರ ಕೊಟ್ಟರೆ ಪ್ರಯೋಜನವಿಲ್ಲ. ಗಿಡಕ್ಕೆ ಅಗತ್ಯವಿರುವ ಪೋಷಕಾಂಶಗಳು ಲಘು ಪೋಷಕಾಂಶಗಳನ್ನು ತುಲನೆ ಮಾಡಿ ಗೊಬ್ಬರ ಕೊಡಬೇಕು. ಸಂಸ್ಥೆ ತಯಾರಿಸುವ ಗೊಬ್ಬರಗಳಲ್ಲಿ ಸಾರಜನಕ ಸ್ಥಿರೀಕರಿಸುವ ಅಜೋಸ್ಸರಿಲ್ಲಂ, ರಂಜಕ ಕರಗಿಸುವ ಪಿ.ಎಸ್.ಬಿ. ಮತ್ತು ಪೊಟಾಷ್ ಒದಗಿಸುವ ಪೊಟ್ಯಾಶ್ ಅಣುಜೀವಿ, ಟ್ರೈಕೋಡರ್ಮ, ಖನಿಜಾಂಶಗಳ ಪೂರೈಕೆಗೆ ಮೈಕೋರೈಜಾ ಮುಂತಾದ ಅಣುಜೀವಿ ಗೊಬ್ಬರಗಳು (ಜೈವಿಕ ಗೊಬ್ಬರಗಳು )ನ್ನು ಹೆಚ್ಚುವರಿಯಾಗಿ ಆಧುನಿಕ ವಿಜ್ಞಾನಿಗಳ ಸಲಹೆಯಂತೆ ಸೇರಿಸಲಾಗುತ್ತದೆ. ರಾಸಾಯನಿಕ ಗೊಬ್ಬರಗಳಿಂದ ದೊರೆಯುವ ಹೆಚ್ಚುವರಿ ಎನ್.ಪಿ.ಕೆ.ಯು ಇಂತಹ ಜೈವಿಕ ಗೊಬ್ಬರಗಳಿಂದಲೂ ಸಸ್ಯಗಳಿಗೆ ಲಭ್ಯವಾಗುತ್ತದೆ. ರಾಸಾಯನಿಕ ಗೊಬ್ಬರವು ಮಣ್ಣು ಮತ್ತು ಸೂಕ್ಷ್ಮ ಜೀವಿಗಳನ್ನು ನಾಶಮಾಡಿ ಸಸ್ಯಕ್ಕೆ ಎನ್.ಪಿ.ಕೆ. ಒದಗಿಸಿದರೆ, ಜೈವಿಕ ಗೊಬ್ಬರಗಳು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದರ ಜೊತೆಗೆ ಸಸ್ಯಗಳಿಗೆ ಎನ್.ಪಿ.ಕೆ.ನ್ನೂ ಸಹ ಒದಗಿಸುತ್ತವೆ. ಔದಲಹಿಂಡಿ, ಹೊಂಗೆ ಹಿಂಡಿ, ಎರೆಜಲ, ಸಮುದ್ರ ಪಾಚಿ, ತೆಂಗಿನ ನಾರಿನಪುಡಿ ಬಯೋಚಾರ್ ಮುಂತಾದ ವಸ್ತುಗಳನ್ನೂ ಸಹ ಪೋಷಕಾಂಶಗಳ ಪೂರೈಕೆಗಾಗಿ ಸೇರಿಸಲಾಗುತ್ತದೆ. ಈ ಯಾವ ವಸ್ತುಗಳೂ ಸಹ ರಾಸಾಯನಿಕವಲ್ಲ ಎನ್ನುವುದು ತಿಳಿದಿರಲಿ. ಎಲ್ಲವೂ ಸಾವಯವ ಮತ್ತು ಜೈವಿಕ ವಸ್ತುಗಳಾಗಿವೆ.
ನುರಿತ ಕೆಲಸಗಾರರು
ಸಿರಿಕಮಲ ಇಂಡಸ್ಟ್ರಿಯಲ್ಲಿ ಸಾಕಷ್ಟು ಧೀರ್ಘಕಾಲದ ಅನುಭವ ಹೊಂದಿರುವ ನುರಿತ ಕೆಲಸಗಾರರಿದ್ದಾರೆ. ಸಂಸ್ಥೆಯ ಯಶಸ್ಸಿನಲ್ಲಿ ಮತ್ತು ಉತ್ತಮ ಗುಣಮಟ್ಟದ ಗೊಬ್ಬರ ತಯಾರಿಸುವಲ್ಲಿ ಇವರ ಪರಿಶ್ರಮ ಪಾತ್ರ ಮತ್ತು ಕೊಡುಗೆ ತುಂಬಾ ಇದೆ.