18 ವರ್ಷಗಳ ನಿರಂತರ ಸೇವೆಯಲ್ಲಿ
slider4
slider2
previous arrow
next arrow

ಸಿರಿಕಮಲ ಬಯೋಆರ್ಗ್ಯಾನಿಕ್ ಇಂಡಸ್ಟ್ರೀಸ್

ರೈತರಿಗಾಗಿಯೇ ರೈತರಿಂದಲೇ ಗ್ರಾಮೀಣ ಪ್ರದೇಶದಲ್ಲಿಯೇ ಹುಟ್ಟಿ ರೈತರಿಂದಲೇ ಘೋಷಿಸಲ್ಪಡುತ್ತಿರುವ ಕೃಷಿ ಅವಲಂಬಿತ ಕೈಗಾರಿಕೆ ಸ್ಥಾಪನೆ- 1999ನೇ ಇಸವಿ, ಉತ್ತರ ಕನ್ನಡ ಜಿಲ್ಲೆಯ ಸಿರಸಿ ತಾಲ್ಲೂಕಿನ ಜಾನ್ಮನೆ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಬಲವಳ್ಳಿ ಗ್ರಾಮದ ಕೊಡೇಗದ್ದೆ ಊರಿನಲ್ಲಿ ಕಮಲಾಕರ ವೆಂಕಟ್ರಮಣ ಭಟ್ ಎಂಬ ರೈತ ಕುಟುಂಬದ ವ್ಯಕ್ತಿಯಿಂದ ಖಾದಿ ಮಂಡಳಿಯ ಯೋಜನೆಯ ಅಡಿಯಲ್ಲಿ ಈ ಕೃಷಿ ಆಧಾರಿತ ಎರೆಹುಳು ತಯಾರಿಕಾ ಕೈಗಾರಿಕೆ ಸ್ಥಾಪನೆಗೊಂಡಿತು.

ಕೈಗಾರಿಕೆಯ ವೈವಿದ್ಯಮಯ ಉತ್ಪನ್ನಗಳು

ಮೊದಲು ಕೇವಲ ಎರೆಹುಳು ಗೊಬ್ಬರ ಮಾತ್ರ ತಯಾರಿಸುತ್ತಿದ್ದ ಸಂಸ್ಥೆ ಅನಂತರ ರೈತರ ಅಗತ್ಯಕ್ಕನುಸಾರವಾಗಿ ಎರೆಹುಳು ಗೊಬ್ಬರವನ್ನು ಮೂಲವಸ್ತುವನ್ನಾಗಿಟ್ಟುಕೊಂಡು ಅದಕ್ಕೆ ಇನ್ನೂ ಹಲವು ಉಪಯುಕ್ತ ವಸ್ತುಗಳನ್ನು ಸೇರಿಸಿ ಮೌಲ್ಯವರ್ಧನೆ ಮಾಡಿ ಇನ್ನೂ ಹಲವಾರು ಬ್ರಾಂಡ್‌ಗಳನ್ನು ತಯಾರಿಸಿ ರೈತರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಸಂಸ್ಥೆ ಈಗ ಮಿತ್ರ ಸಂಜೀವಿನಿ ಸಾವಯವ ಗೊಬ್ಬರ, ಸಂಜೀವಿನಿ ಡೀಲಕ್ಸ್ ಸಾವಯವ ಗೊಬ್ಬರ, ಗಂಗಾ ಸಾವಯವ ಗೊಬ್ಬರ (ಇವು ಅಡಿಕೆ ಮತ್ತು ಕಾಳುಮೆಣಸು ಸ್ಪೆಷಲ್ ಆಗಿವೆ). ಕೇರಳ ಸಾವಯವ ಗೊಬ್ಬರ (ಶುಂಠಿ ಸ್ಪೆಷಲ್), ಕುರಿಕಮಲ ಸಾವಯಯ ಗೊಬ್ಬರ, ಶ್ರೀಕಮಲ ಎರೆಹುಳು ಗೊಬ್ಬರ, ಕಹಿಕಮಲ ಸಾವಯವ ಗೊಬ್ಬರ ಹೀಗೆ ಹಲವಾರು ಬ್ರಾಂಡ್‌ಗಳನ್ನು ಹೊಂದಿದ್ದು ರೈತರಿಗೆ ಆಯ್ಕೆಗೆ ಅವಕಾಶಗಳಿವೆ. ಅವರ ಬಜೆಟ್‌ಗೆ ತಕ್ಕಂತೆ ಮತ್ತು ಅವರ ವಿಚಾರಕ್ಕೆ ತಕ್ಕಂತೆ ಸೂಕ್ತ ಬ್ರಾಂಡ್ ಆಯ್ಕೆ ಮಾಡಿಕೊಳ್ಳಬಹುದು.

ಶ್ರೀಕಮಲ

ಸಂಜೀವಿನಿ ಡಿಲಕ್ಸ್

ಗಂಗಾ

ಮಿಶ್ರ ಸಂಜೀವಿನಿ

ಕೇರಳ

ಸಂಜೀವಿನಿ ಎರೆಜಲ

ದೀರ್ಘಾವಧಿಯಲ್ಲಿ ಸಿರಿಕಮಲ ಇಂಡಸ್ಟ್ರಿಯಲ್ಲಿ ತಯಾರಾಗುವ ಗೊಬ್ಬರ ಬಳಸಿದ
ಕೆಲವು ರೈತರ ಅನುಭವ, ಅನಿಸಿಕೆ

ಶ್ರೀ ಸತೀಶ್ ಭಾಗ್ವತ್ ದಂಟಕಲ್ ಹಾರ್ಸಿಕಟ್ಟ, ಸಿದ್ದಾಪುರ (ಉ.ಕ.) ಮೊ: 08389248204
(18 ವರ್ಷಗಳಿಂದ)

ನಾನು ಕೊಡೆಗದ್ದೆಯ ಕಮಲಾಕರ ಭಟ್ ತಯಾರಿಸುತ್ತಿರುವ ಎರೆಹುಳು ಗೊಬ್ಬರವನ್ನು ಕಳೆದ 18 ವರ್ಷಗಳಿಂದ ನಿರಂತರವಾಗಿ ನನ್ನ ಅಡಿಕೆ ತೋಟಕ್ಕೆ ಹಾಕುತ್ತಿದ್ದೇನೆ. ಅವರು 3 ಕೆ.ಜಿ.ಯಂತೆ ಹಾಕಲು ಹೇಳಿದ್ದರಾದರೂ ನಾನು ಪ್ರತಿ ಮರಕ್ಕೆ 2 ಕೆ.ಜಿ.ಯಂತೆ ಕೊಟ್ಟಿದ್ದೇನೆ. ನನ್ನ ತೋಟ ಈಗ ಮೊದಲಿಗಿಂತಲೂ ಚೆನ್ನಾಗಿದೆ. ಇಳುವರಿ ಚೆನ್ನಾಗಿದೆ. ನನಗಿಂತಲೂ ಚೆನ್ನಾಗಿ ಕೃಷಿ ಮಾಡುವವರ ತೋಟಕ್ಕಿಂತಲೂ ನನ್ನ ತೋಟ ಚೆನ್ನಾಗಿದೆ. ಇದರ ಶ್ರೇಯಸ್ಸು ಇವರು ತಯಾರಿಸುತ್ತಿರುವ ಗೊಬ್ಬರಕ್ಕೆ ಸಲ್ಲಬೇಕು ಎಂದರೆ ತಪ್ಪಾಗಲಾರದು. ಹೆಚ್ಚಾಗಿ ಬಳಸಿದ್ದು ಇವರ ಶ್ರೀಕಮಲ ಎರೆಗೊಬ್ಬರವನ್ನು ಇತ್ತೀಚೆಗೆ 6-7 ವರ್ಷಗಳಿಂದೀಚೆ ಕಹಿ ಕಮಲ, ಸಂಜೀವಿನಿ ಸಹ ಬಳಸಿದ್ದೇನೆ. ಎರೆಹುಳು ಗೊಬ್ಬರವು ಸಗಣಿ ಗೊಬ್ಬರದ್ದೇ ಇನ್ನೊಂದು ರೂಪ. ತೋಟಕ್ಕೆ ಸಗಣಿ ಗೊಬ್ಬರವನ್ನು ಕೊಡಲಿಲ್ಲವಲ್ಲಾ ಎಂಬ ಚಿಂತೆ ನನಗಿಲ್ಲ. ಗೊಬ್ಬರ ಕೊಡುವ ಕೂಲಿ ಉಳಿತಾಯ ಮತ್ತು ಗೊಬ್ಬರ ಹಾಕುವುದು ಎಂದರೆ ಮೊದಲು ದೊಡ್ಡ ತಲೆನೋವು ಆಗುತ್ತಿತ್ತು ಆದರೆ ಈಗ ಅದು ಮೊದಲಿನಂತೆ ದೊಡ್ಡ ದಾಂದಲೆಯಲಾಗಿ ಕಾಣಿಸುವುದಿಲ್ಲ, ಮತ್ತು ಸಗಣಿ ಗೊಬ್ಬರಕ್ಕೆ ಹೋಲಿಸಿದರೆ ದುಬಾಯೂ ಆಗುವುದಿಲ್ಲ. ನನ್ನ ಬುದುಕಿನಲ್ಲಿ ಸಾಮಾಜಿಕವಾಗಿ ಕೆಲವು ಹವ್ಯಾಸಗಳಲ್ಲಿ ನಾನು ತೊಡಗಿಕೊಂಡಿದ್ದರಿಂದ ಕೊಟ್ಟಿಗೆ ಮಾಡಿ ಹಸು ಸಾಕುವುದು ನನಗೆ ಅನಾನುಕೂಲಕರವಾಗಿತ್ತು ಇಂತಹ ಪರಿಸ್ಥಿತಿಯಲ್ಲಿ ಸಹ ನನ್ನ ತೋಟಕ್ಕೆ ಉತ್ತಮವಾದ ಆಹಾರವನ್ನು ನೀಡುತ್ತಿರುವ ಬಗ್ಗೆ ನನಗೆ ಸಂತೋಷ ಮತ್ತು ಸಮಾಧಾನ ಇದೆ. ಮೊದಲವರ್ಷ ಇವರ ಪ್ಯಾಕ್ಟರಿಗೆ ಹೋಗಿ ಇವರು ಗೊಬ್ಬರ ತಯಾರಿಸುತ್ತಿರುವ ರೀತಿಯನ್ನೆಲ್ಲಾ ನೋಡಿ ತಿಳಿದುಕೊಂಡೆ, ನನಗೆ ತೃಪ್ತಿ ಎನಿಸಿತು, ನಂತರದ 17 ವರ್ಷಗಳು ನಾನು ತೋಟದ ಗೊಬ್ಬರಕ್ಕಾಗಿ ಬೇರೆ ಯೋಚನೆಯನ್ನೇ ಮಾಡಲಿಲ್ಲ.

ಶ್ರೀ ಪ್ರಭಾಕರ್ ಹೆಗಡೆ ಹುಲದೇವನಸರ ಸಿರಸಿ (ಉ.ಕ) ಮೊ: 9379176949/08384 246076
(13 ವರ್ಷಗಳಿಂದ)

ಸಿರಿಕಮಲ ಇಂಡಸ್ಟ್ರಿಯಿಂದ ತಯಾರಿಸ್ಪಡುವ ಎರೆಹುಳು ಗೊಬ್ಬರ ಆಧಾರಿತ ಸಾವಯವ ಗೊಬ್ಬರವನ್ನು ನಾನು ಕಳೆದ 13 ವರುಷಗಳಿಂದ ಬಳಸುತ್ತಿದ್ದೇನೆ. (ಕುರಿಕಮಲ, ಸಂಜೀವಿನಿ) ಪ್ರತೀ ವರ್ಷ ಒಂದು ಮರಕ್ಕೆ ಎರಡೂವರೆ ಕೆ.ಜಿ.ಯಿಂದ ಮೂರು ಕೆ.ಜಿ. ಬಳಸಿದ್ದೇನೆ. ಅದನ್ನು ಬಿಟ್ಟು ಬೇರೆ ಯಾವುದೇ ಗೊಬ್ಬರ ಅಥವಾ ರಾಸಾಯನಿಕ ಗೊಬ್ಬರ ಹಾಕಿಲ್ಲ, ನಾನು ಗಮನಸಿದ ಪ್ರಕಾರ ಈ ಗೊಬ್ಬರ ಹಾಕಿದ್ದರಿಂದ ನನ್ನ ತೋಟದಲ್ಲಾದ ಬದಲಾವಣೆಗಳು: 1) ಅಡಕೆ ಮರ ಯಾವತ್ತೂ (ಬೇಸಿಗೆಯಲ್ಲಿ ಸಹ) ಹಸಿರಾಗಿರುತ್ತದೆ. 2) ಭೂಮಿಯಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಾಗಿದೆ. 3)ಅಡಕೆ ಉದುರುವ ಪ್ರಮಾಣ ತುಂಬಾ ಕಡಿಮೆ ಇದೆ. (ಬಾಯಿ, ಮುಕಳಿ ಒಡಕು ) 4) ಇತ್ತೀಚಿನ ಕೆಲವು ವರ್ಷ ಸುತ್ತಮುತ್ತಲವರ ತೋಟದಲ್ಲಿ ಬೇಸಿಗೆಯಲ್ಲಿ ಅಡಿಕೆ ಉದುರಿದ್ದರೂ ನನ್ನ ತೋಟದಲ್ಲಿ ಉದುರಲಿಲ್ಲ. 5) ಅಡಿಕೆ ಮರದ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವಂತೆ ಕಂಡು ಬಂತು. 6) ತೋಟದಲ್ಲಿ ಎರೆಹುಳಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. 7) ಈ ಮೊದಲು ನನ್ನ ತೋಟದಲ್ಲಿ ಸುಳಿ ಕೊಳೆ ರೋಗ ಬಂದು ಒಂದಷ್ಟು 8-10 ವರ್ಷದ ಅಡಿಕೆ ಮರಗಳು ಸಾಯುತ್ತಿದ್ದವು. ಆದರೆ ಈಗ ಆ ಸಮಸ್ಯೆ ಕಾಣುತ್ತಿಲ್ಲ. 8) ತೋಟಕ್ಕೆ ಗೊಬ್ಬರ ಹಾಕುವ ಕೂಲಿಯಲ್ಲಿ ಬಹಳ ಉಳಿತಾಯವಾಗಿದೆ. 9) ಅಡಿಕೆ ಗೊನೆಯಲ್ಲಿ ಈ ಮೊದಲಿಗಿಂತ ಹೆಚ್ಚು ಕಾಯಿಗಳು ಇರುತ್ತವೆ. 10) ಒಟ್ಟಾರೆ ಇಳುವರಿ ಮೊದಲಿಗಿಂತ ಹೆಚ್ಚು ಇದೆ.

ಶ್ರೀ ಪ್ರಭಾಕರ ರಾಮಕೃಷ್ಣ ಹೆಗಡೆ ಹೂಡ್ಲಮನೆ ಸಿರಸಿ (ಉ.ಕ)
(9 ವರ್ಷಗಳಿಂದ)

ಸುಮಾರು 9 ವರ್ಷಗಳಿಂದ ಸಿರಿಕಮಲ ಇಂಡಸ್ಟ್ರಿಯ ಕಮಲಾಕರ ಭಟ್ರು ತಯಾರಿಸುತ್ತಿರುವ ಎರೆಹುಳು ಆಧಾರಿತ ಸಾವಯವ ಗೊಬ್ಬರಗಳನ್ನು ನಿರಂತರವಾಗಿ ಬಳಸುತ್ತಿದ್ದೇನೆ. ಅದಕ್ಕೂ ಮೊದಲು ದಡ್ಡಿಗೊಬ್ಬರವನ್ನು ಉಪಯೋಗಿಸುತ್ತಿದ್ದೆ. ನಂತರ ಈಗ ಇವರ ಗೊಬ್ಬರ ಬಳಸುತ್ತಿದ್ದೇನೆ. ನನ್ನ ತೋಟದ ಅಡಿಕೆ ಮರಗಳಲ್ಲಿ ಈಗ ಹಿಂದಿಗಿಂತಲೂ ಹೆಚ್ಚಿನ ಫಲಿತಾಂಶ ಕಂಡಿದ್ದೇವೆ. ಮೊದಲು ಒಂದು ಮರಕ್ಕೆ 1-11/2 ಕೆಜಿ ಬಳಸುತ್ತಿದ್ದೆ. ಈಗ ಪರಿಣಾಮ ಕಂಡು ಬಂದದ್ದರಿಂದ ಈಗ ಇನ್ನೂ ಹೆಚ್ಚು ಅಂದರೆ 21/2 ಕೆ.ಜಿ.ಯಂತೆ ಬಳಸುತ್ತಿದ್ದೇನೆ. ಭೂಮಿ ತುಂಬಾ ಹಗುರವಾಗಿದ್ದು, ಬಿಗಿತನವಿಲ್ಲ, ತೆಂಗಿಗೂ ಸಹ ಉಪಯೋಗಿಸಿದ್ದೇನೆ. ತುಂಬಾ ಅನುಕೂಲವಾಗಿದೆ. ಇವರ ಗೊಬ್ಬರ ಬಳಸಿದರೆ ದಡ್ಡಿ ಗೊಬ್ಬರ ಮತ್ತು ರಾಸಾಯನಿಕ ಬಳಸುವ ಅಗತ್ಯವಿಲ್ಲ. ಇದು ನಂಬಿಕಸ್ಥ ಪರ್ಯಾಯ ಗೊಬ್ಬರ ಹೌದು.

ಶ್ರೀ ಗೋಪಾಲಭಟ್ರು ಓಡಲಮನೆ ರೇವಣಶಬ್ದ, ಸಿರಸಿ(ಉ.ಕ) ಮೊ:9448997094
(10 ವರ್ಷಗಳಿಂದ)

ನಾನು ಸಿರಿಕಮಲ ಇಂಡಸ್ಟ್ರಿಯ ಕಮಲಾಕರ್ ಭಟ್ ತಯಾರಿಸುತ್ತಿರುವ ಎರೆಹುಳು ಗೊಬ್ಬರವನ್ನು ಕಳೆದ 10 ವರ್ಷಗಳಿಂದ ನನ್ನ ತೋಟಕ್ಕೆ ಬಳಸುತ್ತಿದ್ದೇನೆ. (ಮರವೊಂದಕ್ಕೆ 3 ಕೆ.ಜಿಯಂತೆ) ಅಡಕೆ ಮರ ಹಿಂದಿನದಕ್ಕಿಂತಲೂ ಉತ್ತಮವಾಗಿದೆ. ಇಳುವರಿ ತುಂಬಾ ಚೆನ್ನಾಗಿ ಬರುತ್ತಿದೆ. ತೋಟಕ್ಕೆ ಈ ಗೊಬ್ಬರ ಹಾಕುವುದು ಉತ್ತಮ ಎಂಬುದು ನನ್ನ ಅಭಿಪ್ರಾಯವಾಗಿದೆ. ಇವರ ಶ್ರೀಕಮಲ ಮತ್ತು ಸಂಜೀವಿನಿ ಗೊಬ್ಬರ ನಾನು ಬಳಸಿದ್ದೇನೆ.

ಶ್ರೀ ಕೃಷ್ಣ ಮಾಬ್ಲೇಶ್ವರ ಭಟ್ ಡೊಂಬೆಸರ, ಶಿರಸಿ ಮೊ:97407 69434
(10 ವರ್ಷಗಳಿಂದ)

ನಾನು ಸಿರಿಕಮಲ ಇಂಡಸ್ಟ್ರಿಯ ಕಮಲಾಕರ್ ಭಟ್ ತಯಾರಿಸುತ್ತಿರುವ ಎರೆಹುಳು ಗೊಬ್ಬರವನ್ನು ಕಳೆದ 10 ವರ್ಷಗಳಿಂದ ನನ್ನ ತೋಟಕ್ಕೆ ಬಳಸುತ್ತಿದ್ದೇನೆ. (ಮರವೊಂದಕ್ಕೆ 3 ಕೆ.ಜಿಯಂತೆ) ಅಡಕೆ ಮರ ಹಿಂದಿನದಕ್ಕಿಂತಲೂ ಉತ್ತಮವಾಗಿದೆ. ಇಳುವರಿ ತುಂಬಾ ಚೆನ್ನಾಗಿ ಬರುತ್ತಿದೆ. ತೋಟಕ್ಕೆ ಈ ಗೊಬ್ಬರ ಹಾಕುವುದು ಉತ್ತಮ ಎಂಬುದು ನನ್ನ ಅಭಿಪ್ರಾಯವಾಗಿದೆ. ಇವರ ಶ್ರೀಕಮಲ ಮತ್ತು ಸಂಜೀವಿನಿ ಗೊಬ್ಬರ ನಾನು ಬಳಸಿದ್ದೇನೆ.

ಶ್ರೀ ಕೃಷ್ಣ ನಾರಾಯಣ ಹೆಗಡೆ ಕೃಷ್ಣಕೆರೆ ಗೇರುಸೊಪ್ಪ, ಹೊನ್ನಾವರ ಮೊ: 9481049955

ನಾನು ಕೃಷ್ಣ ನಾರಾಯಣ ಹೆಗಡೆ ಕೃಷ್ಣಕೆರೆ (ಗೇರುಸೊಪ್ಪ) ಸಿರಿಕಮಲ ಇಂಡಸ್ಟ್ರೀಸ್ನಲ್ಲಿ ತಯಾರಾಗುತ್ತಿರುವ ಸಿರಿಕಮಲ ಕಂಪನಿಯ ಸಾವಯವ ಗೊಬ್ಬರವಾದ ಸಂಜೀವಿನಿ ಡೀಲಕ್ಸ್ ಗೊಬ್ಬರವನ್ನು ಕಳೆದ ನಾಲ್ಕು (4) ವರ್ಷಗಳಿಂದ ಬಳಸುತ್ತಿದ್ದೇನೆ. ಹೆಚ್ಚಾಗಿ ತೆಂಗಿನ ಮರಕ್ಕೆ ನಾನು ಈ ಗೊಬ್ಬರವನ್ನು ಬಳಸುತ್ತಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ನಾನು ಗಮನಾರ್ಹ ಬದಲಾವಣೆಯನ್ನು ಗಮನಿಸುತ್ತಿದ್ದೇನೆ. ವಿಶೇಷವಾಗಿ ಬೇರು-ಹುಳುಗಳಿಗೆ ಮತ್ತು ನುಸಿಪೀಡೆಗೆ ಈ ಗೊಬ್ಬರದ ಬಳಕೆ ತಡೆಯೊಡ್ಡುತ್ತದೆ. ಅಲ್ಲದೇ ಮಣ್ಣಿನಲ್ಲಿ ಸಾವಯವ ಅಂಶಗಳು ಹೆಚ್ಚುತ್ತಿರುವುದು ಕಂಡುಬಂದಿದೆ. ಇಳುವರಿಯೂ ಸಹ ಹೆಚ್ಚುತ್ತಿದೆ. ಮಣ್ಣಲ್ಲಿ ಎರೆಹುಳುವಿನಲ್ಲಿ ಸಂಖ್ಯೆ ಸಹ ಹೆಚ್ಚುತ್ತಿದೆ. ಈ ಗೊಬ್ಬರವನ್ನು ಬಳಸಿದ ಮರಕ್ಕೆ ಬೇರೆ ಯಾವ ಗೊಬ್ಬರವನ್ನೂ ಬಳಸಿಲ್ಲ. ಒಟ್ಟಿನಲ್ಲಿ ಮಣ್ಣಿಗೆ ಬೆಳೆಗೆ ಇದೊಂದು ಉತ್ತಮ ಗೊಬ್ಬರ ಎಂದರೆ ಅತಿಶಯೋಕ್ತಿಯಲ್ಲ.

ಮಂಜುನಾಥ ಶಂಭು ಹೆಗಡೆ ಕೊಂಕೇರಿ ಕಡತೋಕಾ, ಹೊನ್ನಾವರ, ಕುಮಟ ಮೊ: 9535437756
(12 ವರ್ಷಗಳಿಂದ)

ಕೊಡೇಗದ್ದೆಯ ಸಿರಿಕಮಲ ಇಂಡಸ್ಟ್ರಿಯ ಕಮಲಾಕರ ಭಟ್ಟರು ತಯಾರಿಸುತ್ತಿರುವ ಎರೆಹುಳು ಸಾವಯವ ಗೊಬ್ಬರವನ್ನು ಕಳೆದ 12 ವರ್ಷಗಳಿಂದ ನನ್ನ ಅಡಿಕೆ, ತೆಂಗು ಜಾಯಿಕಾಯಿ ತೋಟದ ಒಂದು ಭಾಗಕ್ಕೆ ಪ್ರತಿ ವರ್ಷ ಹಾಕುತ್ತಿದ್ದೇನೆ. ತುಲನಾತ್ಮಕ ಪರಿಣಾಮ ನನ್ನ ಪ್ರಕಾರ 1)ಅಡಿಕೆ ಬೆಳೆಯಲ್ಲಿ ಅಡಿಕೆಯ ಗಾತ್ರ ಮತ್ತು ತೂಕ ನಿಶ್ಚಿತವಾಗಿ ಹೆಚ್ಚಳವಾಗಿರುತ್ತದೆ. (2) ಭೂಮಿಯಲ್ಲಿಯೇ ಎರೆಹುಳು ಉತ್ಪತ್ತಿಯಾಗಿ ಮಣ್ಣು ಸಮೃದ್ಧಿಯಾಗಿದೆ. ಕಳೆ ಕತ್ತರಿಸಿ ಮರಕ್ಕೆ ಹಾಕಿದರೆ ಒಳ್ಳೆಯ ಪೂರಕ ಎರೆಗೊಬ್ಬರವಾಗುತ್ತದೆ. (3) ಆರೂಪಿತ ತೋಟವನ್ನು ರೂಪಿತಕ್ಕೆ ತರುವುದಕ್ಕೆ ಸಿರಿಕಮಲ ಎರೆಗೊಬ್ಬರ ಉತ್ತಮ ಗೊಬ್ಬರ ಎಂಬ ಬಗ್ಗೆ ಎರಡು ಮಾತಿಲ್ಲ. (4) ಬೇರೆ ಗೊಬ್ಬರಗಳಿಗೆ ತುಲನೆ ಮಾಡಿದಾಗ ಆರ್ಥಿಕವಾಗಿ ದುಬಾರಿಯಾಗುವುದಿಲ್ಲ. (5) ಕೆಲಸಗಾರರ ಆಭಾವದ ಈ ದಿನಗಳಲ್ಲಿ ಸಿರಿಕಮಲದ ಗೊಬ್ಬರಗಳು ನಮಗೆ ವರದಾನ ಎನ್ನಬಹುದು.

ಶ್ರೀ ಪ್ರಕಾಶ್ಭಟ್ ಸಿರಿಕುಳಿ ರೇವಣಕಟ್ಟ, ಸಿರಸಿ (ಉ.ಕ) ಮೊ: 9480132054
(10 ವರ್ಷಗಳಿಂದ)

ಸಿರಿಕಮಲ ಇಂಡಸ್ಟ್ರಿಯವರು ತಯಾರಿಸುತ್ತಿರುವ ಎರೆಗೊಬ್ಬರ ಆಧಾರಿತ ಸಾವಯವ ಗೊಬ್ಬರವನ್ನು (ಶ್ರೀಕಮಲ ಎರೆಗೊಬ್ಬರ, ಸಂಜೀವಿನ ಡೀಲಕ್ಸ್ ಮತ್ತು ಮಿತ್ತಸಂಜೀವಿನಿ) ನಾನು 10 ವರ್ಷಗಳಿಂದ ಬಳಸುತ್ತಿದ್ದೇನೆ. ಇದರಿಂದ ನನ್ನ ಅಡಿಕೆ ತೋಟದಲ್ಲಿದ್ದ ಹಿಡಿಮುಂಡಿಗೆ ರೋಗ ಸಂಪೂರ್ಣ ನಿಯಂತ್ರಣವಾಗಿದೆ.

ಶ್ರೀ ಮಂಜನಾಥ ಹೆಗಡೆ ದಂಟಕಲ್, ಹಾರ್ಸಿಕಟ್ಟ, ಸಿದ್ದಾಪುರ (ಉ.ಕ.) (18 ವರ್ಷಗಳಿಂದ)

ನಾನು ಸಿರಿಕಮಲ ಇಂಡಸ್ಟ್ರಿಯವರು ತಯಾರಿಸುವ ಎರೆಹುಳು ಸಾವಯವ ಗೊಬ್ಬರಗಳನ್ನು ಕಳೆದ 18 ವರ್ಷಗಳಿಂದ ಬಳಸುತ್ತಿದ್ದೇನೆ. 18 ವರ್ಷಗಳಿಂದ ತೋಟಕ್ಕೆ ಬೇರೆ ಯಾವ ಗೊಬ್ಬರವನ್ನು ಸಹ ಹಾಕಲಿಲ್ಲ. ರಾಸಾಯನಿಕ ಗೊಬ್ಬರವನ್ನಂತೂ ಕೊಟ್ಟೇ ಇಲ್ಲ. ನನ್ನ ತೋಟ ಈಗ ಮೊದಲಿಗಿಂತ ಚೆನ್ನಾಗಿದೆ. ಮತ್ತು ಯೋಗ್ಯ ಇಳುವರಿ ಬರುತ್ತಿದೆ. ಗೊಬ್ಬರ ಹಾಕುವ ಕೂಲಿ ಉಳಿತಾಯವಾಗಿದೆ. ನಾನು ತೋಟಕ್ಕೆ ಸಗಣಿ ಗೊಬ್ಬರವನ್ನು ಖರೀದಿ ಮಾಡಿ ಹಾಕುತ್ತಿದ್ದೆ. ಈಗ ಇವರ ಗೊಬ್ಬರವೇ ನನಗೆ ಒಂದು ವರದಾನವಾಗಿದೆ ಎನ್ನಬಹುದು.

ಶ್ರೀ ಪ.ವಿ.ಶಾನಭಾಗ ಉಂಚಗಿ ತಾಲ್ಲೂಕು, ಕುಮಟಾ, ದೂ. 08386274128 (11 ವರ್ಷಗಳಿಂದ)

ಸಿರಿಕಮಲ ಇಂಡಸ್ಟ್ರಿಯ ಕಮಲಾಕರ ಭಟ್ರು ತಯಾರಿಸುತ್ತಿರುವ ಶ್ರೀ ಕಮಲ ಮತ್ತು ಕಹಿಕಮಲ ಮತ್ತು ಸಂಜೀವಿನಿ ಗೊಬ್ಬರಗಳನ್ನು ನನ್ನ ಬಾಗಾಯತದ ಅಡಿಕೆ ತೆಂಗು ಬಾಳೆಗಿಡ ಮತ್ತು ಜಾಯಿಕಾಯಿ ಗಿಡಗಳಿಗೆ 10-12 ವರ್ಷಗಳಿಂದ ಹಾಕುತ್ತ ಬಂದಿರುತ್ತಿದ್ದು, ಅವರು ಸೂಚಿಸಿದ ಪ್ರಯಾಣದಲ್ಲಿ ಕೊಡಲು ಸಾಧ್ಯವಾಗದಿದ್ದರೂ ಸುಮಾರು ಅರ್ಧ ಮುಕ್ಕಾಲು ಪ್ರಮಾಣದಲ್ಲಿ ಕೊಡುತ್ತ ಬಂದಿರುತ್ತೇನೆ. ಇಂದಿನ ಕಾಲದಲ್ಲಿ ದಡ್ಡಿಗೊಬ್ಬರ ತಯಾರಿಕೆ ರೈತನಿಗೆ ಒಂದು ಸವಾಲಾಗಿ ಪರಿಣಮಿಸಿದ್ದು ದನಗಳನ್ನು ಸಾಕುವುದೇ ಕಷ್ಟವಾಗಿದೆ. ಇಂತಹ ಸಮಯದಲ್ಲಿ ಇವರು ತಯಾರಿಸುವ ಗೊಬ್ಬರ ನಮ್ಮಂಥಹ ರೈತರಿಗೆ ವರದಾನವಾಗಿದೆ. ಈ ಗೊಬ್ಬರವು ದಡ್ಡಿಗೊಬ್ಬರಕ್ಕೆ ಪರ್ಯಾಯವಾದ ಗೊಬ್ಬರ ಎಂಬ ಬಗ್ಗೆ ಎರಡು ಮಾತಿಲ್ಲ. ಅಲ್ಲದೇ ಗಿಡಗಳಿಗೆ ಗೊಬ್ಬರ ಕೊಡುವ ಕೂಲಿಯೂ ಉಳಿತಾಯವಾಗುತ್ತದೆ. ಇನ್ನೂ ತನಕ ಈ ಹಾಕಿ ಅನುಭವ ಇಲ್ಲದವರು ಒಮ್ಮೆ ಸದ್ರಿ ಗೊಬ್ಬರ ಉಪಯೋಗಿಸಿ ಅನುಭವ ಮಾಡಿಕೊಳ್ಳಬಹುದೆಂದು ನನ್ನ ಅನಿಸಿಕೆ.

ಶ್ರೀ ವೆಂಕಟ್ರಮಣ ಕೃಷ್ಣಭಟ್ ತೊಡೇಗದ್ದೆ, ಸಿರಸಿ(ಉ.ಕ), ಮೊ: 9740218819
(18 ವರ್ಷಗಳಿಂದ)

ಸಿರಿಕಮಲ ಇಂಡಸ್ಟ್ರಿಯ ಕಮಲಾಕರಭಟ್ ತಯಾರಿಸುತ್ತಿರುವ ಎರೆಗೊಬ್ಬರ ಮತ್ತು ಎರೆಗೊಬ್ಬರ ಆಧಾರಿತ ಸಂಜೀವಿನಿ ಗೊಬ್ಬರವನ್ನು ನಾನು ನನ್ನ ತೋಟದ ಅಡಿಕೆ ಮತ್ತು ಕಾಳುಮೆಣಸಿಗೆ ಬಳಸಿದ್ದೇನೆ. ಅಡಿಕೆ ಮರಕ್ಕೆ ಮೂರು ಕೆ.ಜಿ.ಯಂತೆ ಮತ್ತು ಕಾಳುಮೆಣಸಿಗೆ ಒಂದು ಕೆ.ಜಿ.ಯಂತೆ ಕಳೆದ 18 ವರ್ಷಗಳಿಂದ ಪ್ರತಿ ವರ್ಷ ಬಳಸುತ್ತಿದ್ದೇನೆ. ನಾನು ಗಮನಿಸಿದ ಬದಲಾವಣೆಗಳು, 1) ತೋಟ ಯಾವಾಗಲೂ ಹಸಿರಾಗಿರುತ್ತದೆ. 2) ಅಡಿಕೆ ಮರದ ಹೆಡೆಗಳು ಕೆಳಮುಖವಾಗಿ ಬಾಗಿರುತ್ತದೆ. 3) ಈ ಗೊಬ್ಬರ ಬಳಸುವುದಕ್ಕಿಂತ ಮೊದಲು ಪ್ರತೀ ವರ್ಷ ದಡ್ಡಿಗೊಬ್ಬರವನ್ನು ಹಾಸುಗೊಬ್ಬರ ಮಾಡುತ್ತಿದ್ದೆ. ನೀರಾವರಿ ತುಂಬಾ ಮೊದಲಿನಿಂದಲೂ ಇತ್ತು. ಆಗ ಸರಾಸರಿ ಒಂದು ಎಕರೆಗೆ ಪರಮಾವಧಿ ಎಂದರೆ 13 ಕ್ವಿಂಟಾಲ್ ಬರುತ್ತಿತ್ತು. 18 ವರ್ಷಗಳ ಹಿಂದೆ ದಡ್ಡಿ ಗೊಬ್ಬರ ಬಿಟ್ಟು ಇವರಗೊಬ್ಬರ ಹಾಕಲು ಪ್ರಾರಂಭಿಸಿ ನಾಲ್ಕನೇ ವರ್ಷದಿಂದ ಇಳುವರಿಯಲ್ಲಿ ಎಕರೆಗೆ ನಾಲ್ಕು ಕ್ವಿಂಟಾಲ್ ಏರಿಕೆಯಾಗಿದೆ. ಆ ನಂತರ ಪ್ರತೀ ವರ್ಷ 16 ಕ್ವಿಂಟಾಲ್ ಮೇಲೆ ಹೊರತು ಕಡಿಮೆ ಇಲ್ಲ. ಒಂದು ವರ್ಷ ಮಾತ್ರ 15 ಕ್ವಿಂಟಾಲ್ ಇತ್ತು. ಬೆಳೆ ಹೆಚ್ಚಾದ ವರ್ಷ 20 ಕ್ವಿಂಟಾಲ್ ತೆಗೆದಿದ್ದೇನೆ, 4) ಬಾಯಿ ಒಡಕು ಮತ್ತು ಮುಕಳಿ ಒಡಕು ಇಲ್ಲವೇ ಇಲ್ಲ, ಎಂಬಷ್ಟು ನಿಯಂತ್ರಣದಲ್ಲಿದೆ. 5) ಅಡಿಕೆ ಗೊನೆಗಳು ಮಟ್ಟಗೊನೆಯಾಗುತ್ತಿದೆ. 6) ಅಡಿಕೆಯ ತೂಕ ಆಶ್ಚರ್ಯಕರ ರೀತಿಯಲ್ಲಿ ಮೊದಲಿಗಿಂತ ಹೆಚ್ಚಾಗಿರುತ್ತದೆ. 7) ನನ್ನ ತೋಟದಲ್ಲಿ ಕಾಳುಮೆಣಸಿಗೆ ಕೊಳೆರೋಗ ಇಲ್ಲವೇ ಇಲ್ಲ ಎನ್ನಬಹುದು. ಅಕ್ಕಪಕ್ಕದವರ ತೋಟಗಳಲ್ಲಿ 200-300 ಬಳ್ಳಿಗಳು ಮಳೆಗಾಲದಲ್ಲಿ ಶೀಘ್ರ ಸೊರಗು ರೋಗದಿಂದ ಸತ್ತಾಗಲೂ ಸಹ ನನ್ನ ತೋಟದಲ್ಲಿ ಬೆರಳೆಣಿಕೆಯಲ್ಲಿ 3-4 ಬಳ್ಳಿಗಳಿಗೆ ರೋಗ ಬಂದಿರಬಹುದು. ಅದೂ ಗೆಡಿಯಲ್ಲಿರುವ ಬಳ್ಳಿಗಳಿಗೆ. 8) ತೋಟದಲ್ಲಿ ಎರೆಹುಳುಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. 9) ನಾನು ಹೆಚ್ಚು ವರ್ಷ ಇವರ ಶ್ರೀಕಮಲ ಎರೆಗೊಬ್ಬರ ಬಳಸಿದ್ದೇನೆ. ಇತ್ತೀಚೆಗೆ 6-7 ವರ್ಷಗಳಿಂದ ಸಂಜೀವಿನಿಯನ್ನು ಸಹ ಬಳಸಿದ್ದೇನೆ. ಕಾಳುಮೆಣಸಿಗೆ ಜೂನ್-ಜುಲೈ ತಿಂಗಳಲ್ಲಿ ಸಂಜೀವಿನಿ ಗೊಬ್ಬರ ಕೊಡುವುದರಿಂದ ತುಂಬಾ ಪರಿಣಾಮವಿರುತ್ತದೆ. ರೋಗನಿಯಂತ್ರಣಕ್ಕೆ ತುಂಬಾ ಅನುಕೂಲ. ಕಾಳು ಮೆಣಸಿಗೆ ಎರೆ ಜಲವನ್ನು ಸಹ ಸಿಂಪಡಿಸುತ್ತೇನೆ.

ಶ್ರೀ ವಿನೋದ ರಾಮಕೃಷ್ಣಭಟ್ ಪಾರ್ಥಿಮನೆ ಮೂರೂರು, ಕುಮಟಾ (ಉ.ಕ.) ಮೊ: 8762614204
(14 ವರ್ಷಗಳಿಂದ)

ನಾನು ಸಿರಿಕಮಲ ಇಂಡಸ್ಟ್ರಿಯವರು ತಯಾರಿಸುತ್ತಿರುವ ಎರೆಹುಳು ಆಧಾರಿತ ಸಾವಯವ ಗೊಬ್ಬರವನ್ನು ಕಳೆದ 14 ವರ್ಷಗಳಿಂದ ನಮ್ಮ ತೋಟದ ಅಡಿಕೆ ಮತ್ತು ಜಾಯಿಕಾಯಿಗೆ ಬಳಸುತ್ತಿದ್ದೇನೆ. (ಶ್ರೀಕಮಲ, ಕುರಿಕಮಲ ಮತ್ತು ಸಂಜೀವಿನಿ) 1) 14 ವರ್ಷಗಳಿಂದ ಇದನ್ನು ಬಿಟ್ಟು ಬೇರೆ ಯಾವ ಗೊಬ್ಬರ ಅಥವಾ ರಾಸಾಯನಿಕ ಗೊಬ್ಬರವನ್ನು ನನ್ನ ತೋಟಕ್ಕೆ ಹಾಕಲಿಲ್ಲ. ಅಡಿಕೆಗೆಗೆ ಪ್ರಾರಂಭದಲ್ಲಿ 4 ಕೆ.ಜಿ.ಯಂತೆ ಮತ್ತು ನಂತರದ ವರ್ಷಗಳಲ್ಲಿ 3 ಕೆ.ಜಿ (ಒಂದು ಮರಕ್ಕೆ) ಯಂತೆ ಹಾಕಿದ್ದೇನೆ. 2) ಜಾಯಿಕಾಯಿಗೆ 3 ಕೆ.ಜಿ. ಕೊಟ್ಟಿದ್ದೇನೆ. (ಅವರು 10 ಕೆ.ಜಿ. ಹೇಳಿದ್ದರು) ಆದರೂ ಇಳುವರಿ ಹೆಚ್ಚಾಗಿದೆ. 3) ಅಡಿಕೆಯಲ್ಲಿ ಇಳುವರಿ ಮೊದಲಿಗಿಂತ ತುಂಬಾ ಹೆಚ್ಚಾಗಿದೆ. 4) ಅಡಿಕೆ ಒಡೆ, ಉದುರುವುದು ತುಂಬಾ ಕಡಿಮೆಯಾಗಿದೆ. 5) ತೋಟದಲ್ಲಿ ಮೊದಲು ಮಣ್ಣು ಬಿಗಿಯಾಗಿತ್ತು ಆದರೆ ಈಗ ಎರೆಹುಳುಗಳ ಸಂಖ್ಯೆ ತುಂಬಾ ಹೆಚ್ಚಾಗಿದ್ದು ಮಣ್ಣಿನಲ್ಲಿ ಬಿಗಿತನವಿಲ್ಲ, ಸಡಿಲ, ಮೃದುವಾಗಿದೆ. 6) ಗೊಬ್ಬರ ಕೊಡುವ ಕೂಲಿ ಉಳಿತಾಯವಾಗಿದೆ. 7) ಇದು ರಾಸಾಯನಿಕ ಮತ್ತು ದಡ್ಡಿಗೊಬ್ಬರಕ್ಕೆ ಅತ್ಯಂತ ಯಶಸ್ವಿ ಪರ್ಯಾಯ ಗೊಬ್ಬರವಾಗಿದೆ.

ಶ್ರೀ ವಿಶ್ವನಾಥ ಗೋಪಾಲ ಕೃಷ್ಣ ಹೆಗಡೆ ಸೋಮನಳ್ಳಿ, ಸಿರಸಿ, ಉ.ಕ. ದೂ. 083842433550
(5 ವರ್ಷಗಳಿಂದ)

ನಾನು ಕೊಡೆಗದ್ದೆಯ ಸಿರಿಕಮಲದವರು ತಯಾರಿಸುತ್ತಿರುವ ಮಿತ್ರ ಸಂಜೀವಿನಿ ಸಾವಯವ ಗೊಬ್ಬರವನ್ನು ಕಳೆದ 5 ವರ್ಷಗಳಿಂದ ನನ್ನ ಅಡಿಕೆ ತೋಟದ ಒಂದು ಭಾಗಕ್ಕೆ ಪ್ರತೀ ವರ್ಷ ಹಾಕುತಿದ್ದೇನೆ. ಇವರ ಗೊಬ್ಬರವನ್ನು ಕೊಡುವುದಕ್ಕಿಂತ ಮೊದಲು ಈ ತೋಟಕ್ಕೆ ಸಗಣಿ ಗೊಬ್ಬರವನ್ನು ಖರೀದಿಸಿ ಹಾಕುತ್ತಿದ್ದೆ. ಉತ್ತಮ ಸಾಗುವಳಿ ಕ್ರಮಗಳನ್ನೆಲ್ಲಾ ಅಳವಡಿಸಿಕೊಂಡಿದ್ದರಿಂದ ಈ ತೋಟವು ಅತ್ಯಂತ ಸುವ್ಯವಸ್ಥಿತವಾಗಿಯೇ ಇತ್ತು. ಕಳೆದ 5 ವರ್ಷ ನಾನು ಮಾಡಿದ ಬದಲಾವಣೆ ಎಂದರೆ ದಡ್ಡಿಗೊಬ್ಬರಕ್ಕೆ ಬದಲಾಗಿ ಎರೆಹುಳು ಸಂಜೀವಿನಿ ಗೊಬ್ಬರವನ್ನು ಬಳಸಿದ್ದು, ತಜ್ಞರ ಸಲಹೆ ಕೂಡ ನನ್ನನ್ನು ಇದಕ್ಕೆ ಪ್ರೇರೇಪಿಸಿತು. 1) ಗೊಬ್ಬರದಲ್ಲಿ ಬದಲಾವಣೆ ಮಾಡಿದರೂ ಸಹ ನನ್ನ ತೋಟ ಯಥಾ ಯೋಗ್ಯಸ್ಥಿತಿಯಲ್ಲಿಯೇ ಮುಂದುವರೆದಿದೆ. ಇದು ನನಗೆ ಸಂತೋಷದ ವಿಷಯ. 2) ಇವರ ಗೊಬ್ಬರವು ದಡ್ಡಿ ಗೊಬ್ಬರಕ್ಕೆ ಒಂದು ಯೋಗ್ಯವಾದ ಪರ್ಯಾಯ ಗೊಬ್ಬರ ಹೌದು. 3) ಎರೆಹುಳು ಗೊಬ್ಬರವನ್ನು ಸ್ವತಃ ನಾನೂ ಕೂಡ ಒಂದಷ್ಟು ತಯಾರಿಸಿದ್ದು, ಎರೆ ಗೊಬ್ಬರದ ಮಹತ್ವವನ್ನು ನಾನು ಬಲ್ಲವನಾಗಿದ್ದೇನೆ. 4) ಈಗಿನ ಕಾಲದಲ್ಲಿ ದಡ್ಡಿ ಗೊಬ್ಬರವನ್ನು ತೋಟಕ್ಕೆ ಹಾಕುವುದು ಸುಲಭದ ಕೆಲಸವಲ್ಲ, ಮತ್ತು ದಡ್ಡಿಗೊಬ್ಬರದ ಗುಣಮಟ್ಟ ಮೊದಲಿನಂತೆ ಇರುವುದಿಲ್ಲ. 5) ಈ ಹಿನ್ನೆಲೆಯಲ್ಲಿ ಸಹ ಇವರ ಗೊಬ್ಬರವನ್ನು ಹಾಕುವುದು ಸುಲಭ ಮತ್ತು ಕೂಲಿ ಉಳಿತಾಯ, 6) ತೋಟಕ್ಕೆ ಒಂದು ಉತ್ತಮವಾದ ಪರಿಪೂರ್ಣ ಆಹಾರವನ್ನು ನೀಡಿದಂತಾಗುತ್ತದೆ.

ಶ್ರೀ ಪಿ.ಎಂ.ಭಟ್ಟ, ಹೊಸ್ತೋಟ ಹೆಗ್ಗರಣಿ, ಸಿದ್ದಾಪರ, ಮೊ.08389 249423.
(9 ವರ್ಷಗಳಿಂದ)

ನಾನು 9 ವರ್ಷಗಳಿಂದ ಕೊಡೇಗದ್ದೆಯ ಕಮಲಾಕರ ಭಟ್ಟರು ತಯಾರಿಸುತ್ತಿರುವ ಗೊಬ್ಬರವನ್ನು ನನ್ನ ಅಡಿಕೆ ತೋಟಕ್ಕೆ ಬಳಸಿರುವೆ. ನನ್ನ ಅಭಿಪ್ರಾಯದಂತೆ 1) ನಾನು ಸಗಣಿ ಗೊಬ್ಬರಕ್ಕೆ ಪರ್ಯಾಯವಾಗಿ ಇವರ ಸಾವಯವ ಗೊಬ್ಬರವನ್ನು ಅಡಿಕೆ ಮರಕ್ಕೆ 3 ಕೆ.ಜಿ.ಯಂತೆ ಬಳಸಿರುವೆ. 2) ಪ್ರತಿವರ್ಷ ಈ ಗೊಬ್ಬರವನ್ನು ಅಡಿಕೆತೋಟಕ್ಕೆ ಬಳಸಬೇಕು. 3) ಹಾಗೆ ಬಳಸಿದಾಗ ನನ್ನ ಅಡಿಕೆ ತೋಟದ ಇಳುವರಿ ಹೆಚ್ಚಾಗಿದೆ. 4) ಅಡಿಕೆ ತೋಟ ಸದಾ ಹಸಿರಾಗಿರುವುದನ್ನು ಸ್ಪಷ್ಟವಾಗಿ ಗುರುತಿಸಿದ್ದೇನೆ. 5) ಅಡಿಕೆ ತೋಟದಲ್ಲಿ ಎರೆಹುಳುಗಳ ಸಂಖ್ಯೆ ಹೆಚ್ಚಾಗಿದೆ. 6) ಇವರು ಪೂರೈಸುವ ಗೊಬ್ಬರವನ್ನು ಯಾವುದೇ ಮೋಸ ಇಲ್ಲ. ಗುಣಮಟ್ಟದ ಬಗ್ಗೆ ನಾನು ನೂರಕ್ಕೆ ನೂರು ವಿಶ್ವಾಸ ಹೊಂದಿದ್ದೇನೆ.

ಶ್ರೀ ವಿ.ಪಿ.ಹೆಗಡೆ ಸಾಂತೂರು, ಕತಗಾಲು ಮೊ.08386 264337
(15 ವರ್ಷಗಳಿಂದ)

1) ಕೊಡೆಗದ್ದೆ ಕಮಲಾಕರ ಭಟ್ ರವರು ತಯಾರಿಸುತ್ತಿರುವ "ಸಿರಿಕಮಲ, ಕುರಿಕಮಲ ಹಾಗೂ ಸಂಜೀವಿನಿ ಗೊಬ್ಬರಗಳನ್ನು ಕಳೆದ 15 ವರ್ಷಗಳಿಂದ ನಿರಂತರ ಬಳಸಿ ಅದರ ಪರಿಣಾಮ ಉತ್ತಮವಾಗಿರುವುದನ್ನು ಖಾತ್ರಿ ಪಡಿಸಿಕೊಂಡಿದ್ದೇನೆ. (2) ಇವುಗಳ ಬಳಕೆ ನಮ್ಮಲ್ಲಿಯ ಕೃಷಿಯಾದ ಅಡಿಕೆ, ತೆಂಗು, ಬಾಳೆ, ವೀಳ್ಯದೆಲೆ ಹಾಗೂ ಕಾಳುಮೆಣಸು ಇವುಗಳಿಗೆ ಅತ್ಯಂತ ಸೂಕ್ತವಾಗಿದೆ.(3) ನಿಗದಿತ ಅಥವಾ ಸೂಚಿತವಾದ ಪ್ರಮಾಣದಲ್ಲಿ ಈ ಗೊಬ್ಬರ ಕೊಡುವುದು ಅತಿ ಮುಖ್ಯ (4) ಗಿಡಮರಗಳಲ್ಲಿ ಹಸಿರು ವೃದ್ಧಿಯಾಗುವುದು ತತ್ಪರಿಣಾಮವಾದ ಬೆಳವಣಿಗೆಯನ್ನು ಗುರುತಿಸಬಹುದ (5) ಬೆಳೆ ಏರಿಕೆಯಾಗಿ ನಿರಂತರ ಒಂದೇ ರೀತಿಯ ಉತ್ಪನ್ನ ಪಡೆಯಲು ಈ ಗೊಬ್ಬರ ಬಳಸುವುದು ಅತ್ಯಂತ ಸೂಕ್ತ ಎಂದು ನನ್ನ ಎನಿಸಿಕೆ. (6) ದಡ್ಡಿ ಗೊಬ್ಬರದ ಪೂರೈಕೆ ಇಂದಿನ ದಿನಗಳಲ್ಲಿ ಕಷ್ಟಸಾಧ್ಯವಾದ್ದರಿಂದ ಸಿರಿಕಮಲ ಇಂಡಸ್ಟ್ರಿಯವರು ತಯಾರಿಸುವ ಗೊಬ್ಬರ ಬಳಸುವುದು ಕೃಷಿಗೆ ಪರ್ಯಾ ವಿಧಾನ. ಈ ಗೊಬ್ಬರ ಬಳಸಿದರೆ ಬೇರೆ ಯಾವುದೇ ಗೊಬ್ಬರ ಬಳಸುವ ಅಗತ್ಯವಿಲ್ಲ. (7) ಇಂದಿನ ದಿನಗಳಲ್ಲಿ ಮುಖ್ಯವಾಗಿ ಸ್ವಂತ ದಡ್ಡಿಗೊಬ್ಬರ ತಯಾರಿಸಿಕೊಳ್ಳುವ ಚಿಕ್ಕ ಹಿಡುವಳಿದಾರರು, ದಡ್ಡಿ ಗೊಬ್ಬರದ ಜೊತೆಗೆ ಈ ಗೊಬ್ಬರವನ್ನು ಸ್ವಲ್ಪ ಪ್ರಮಾಣದಲ್ಲಿ ಬಳಸಿದಲ್ಲಿ ಇಳುವರಿ ನಿಶ್ಚಿತವಾಗಿ ಹೆಚ್ಚಾಗುತ್ತದೆ.

ಶ್ರೀ ವಿ.ಎಂ ಹೆಗಡೆ ನಿಲುಕೋಡು ಕುಮಟಾ ತಾ., ದೂ.: 08386 269583/9148712769
(10 ವರ್ಷಗಳಿಂದ)

ಸಿರಿಕಮಲ ಇಂಡಸ್ಟ್ರಿಯ ಕಮಲಾಕರ್ ಭಟ್ರವರು ತಯಾರಿಸುತ್ತಿರುವ ಶ್ರೀ ಕಮಲ ಮತ್ತು ಕಹಿಕಮಲ ಸಂಜೀವಿನಿ ಗೊಬ್ಬರವನ್ನು, ಶ್ರೀ ವಿಶ್ವೇಶ್ವರ ಮಹಾಬಲೇಶ್ವರ ಹೆಗಡೆ ಸಾ|| ನೀಲಕೋಡು (ಕುಮಟಾ ತಾಲ್ಲೂಕು) ಆದ ನಾನು ಕಳೆದ 10 ವರ್ಷಗಳಿಂದ ನನ್ನ ತೋಟದ ಅಡಿಕೆ, ತೆಂಗು ವೀಳ್ಯದ ಎಲೆ ಮತ್ತು ಜಾಯಿಕಾಯಿ ಈ ಬೆಳೆಗಳಿಗೆ ಬಳಸುತ್ತಿದ್ದೇನೆ (1) ತೆಂಗಿನ ಮರಕ್ಕೆ ಕಹಿಕಮಲ ಗೊಬ್ಬರವನ್ನು ಹಾಕಿದಾಗ ಉತ್ತಮ ಇಳುವರಿ ಬಂದಿದೆ. (2) ನನ್ನ ತೋಟದಲ್ಲಿರುವ ವೀಳ್ಯದ ಎಲೆಗೆ ಶ್ರೀ ಕಮಲ ಗೊಬ್ಬರವನ್ನು ಬಳಸಿದಾಗ ಹೆಚ್ಚಿನ ಇಳುವರಿ ಬಂದದ್ದು ಕಂಡುಬಂದಿದೆ (ವರ್ಷದಲ್ಲಿ 2 ಸಲ) (3) ವೀಳ್ಯದ ಎಲೆಯ ಗಾತ್ರದಲ್ಲಿ ದೊಡ್ಡದಾಗಿದ್ದು ಕಂಡುಬಂದಿದೆ. (4) ನನ್ನ ತೋಟದಲ್ಲಿರುವ ಜಾಯಿಕಾಯಿ ಮರಗಳಿಗೆ ಈ ರೀತಿ ಬಳಸಿದಾಗ ಅದರಿಂದ ಉತ್ತಮ ಇಳುವರಿ ಬಂದದ್ದು ಕಂಡುಬಂದಿದೆ. ಹಿಂದೆ ದಡ್ಡಿಗೊಬ್ಬರವನ್ನು ಕೊಡುತ್ತಿದ್ದಾಗ ಬರುವ ಇಳುವರಿಗಿಂತ ಜಾಸ್ತಿ ಬಂದದ್ದು (2 ಪಟ್ಟು) ಕಂಡುಬಂದಿದೆ.

ಶ್ರೀ ಎಮ್.ಎಲ್. ಭಟ್ ಉಂಚಳ್ಳಿ, ಹೆಗ್ಗರಣಿ, ಸಿದ್ದಾಪುರ (ಉ. ಕ.)
(10) ವರ್ಷಗಳಿಂದ)

ನಾನು ಕೊಡೇಗದ್ದೆ ಕಮಲಾಕರಭಟ್ ತಯಾರಿಸುತ್ತಿರುವ ಎರೆಹುಳು ಗೊಬ್ಬರವನ್ನು ಕಳೆದ 9-10 ವರ್ಷಗಳಿಂದ ಬಳಸಿದ್ದೇನೆ. 1) ಇವರು ತಯಾರಿಸುತ್ತಿರುವ ಗೊಬ್ಬರವು ಸಗಣಿ ಗೊಬ್ಬರಕ್ಕೆ ಒಂದು ಪರ್ಯಾಯ ಗೊಬ್ಬರ ಹೌದು. 2) ಮಧ್ಯಂತರದಲ್ಲಿ ನಾನು ಸಹ ಎರೆಗೊಬ್ಬರವನ್ನು ಸ್ವಲ್ಪ ಪ್ರಮಾಣದಲ್ಲಿ ತಯಾರಿಸಿಕೊಂಡಿದ್ದೆ. 3) ಎರೆಗೊಬ್ಬರ ಅಡಿಕೆ ತೋಟಕ್ಕೆ ಒಂದು ಉತ್ಕೃಷ್ಟವಾದ ಗೊಬ್ಬರ ಹೌದು. ಇವರ ಗೊಬ್ಬರ ಹಾಕಿದ ನನ್ನ ತೋಟದಲ್ಲಿ ಎರೆಹುಳುಗಳ ಸಂಖ್ಯೆ ಕಂಡಿತ ಹೆಚ್ಚಾಗಿರುತ್ತದೆ. ಇದನ್ನು ಪರಿಕ್ಷಿಸಿ ಖಾತ್ರಿ ಮಾಡಿಕೊಂಡಿದ್ದೇನೆ. ಇದರಿಂದ ಲಾಭವೆಂದರೆ ತೋಟದಲ್ಲಿ ಎರೆಹುಳುಗಳ ಸಂಖ್ಯೆ ಹೆಚ್ಚಾದರೆ ಅವು ಅಲ್ಲಿಯೇ ಇರುವ ಸಾವಯವ ವಸ್ತುಗಳನ್ನು ತಿಂದುಕೊಂಡು ಎರೆಗೊಬ್ಬರ ಉತ್ಪಾದಿಸುತ್ತವೆ. 6) ಇವರ ಗೊಬ್ಬರ ಹಾಕಿದ ಪಾಲಿನಲ್ಲಿ ಇಳುವರಿ ಒಂದೇ ಮಟ್ಟವನ್ನು ಕಾಯ್ದುಕೊಂಡಿದೆ. 7) ಗೊಬ್ಬರ ಹಾಕುವ ಕೂಲಿ ಉಳಿತಾಯವಾಗಿದೆ.

ವಿಶ್ವನಾಥಭಟ್ ಮೂರೂರು, ಕುಮಟಾ ಮೊ.: 82770 89709
(7 ವರ್ಷಗಳಿಂದ)

ಸಿರಿಕಮಲದ ಕಮಲಾಕರ ಭಟ್ ತಯಾರಿಸುವ ಶ್ರೀಮಲ ಮತ್ತು ಸಂಜೀವಿನಿ ಗೊಬ್ಬರನ್ನು ಕಳೆದ 13 ವರ್ಷಗಳಿಂದ ಪ್ರತಿ ವರ್ಷ ಬಳಸುತ್ತಿದ್ದೇನೆ. ಇವರು ಸೂಚಿಸಿದ್ದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬಳಸಿದ್ದೇನೆ. (1-2 ಕೆ.ಜಿ.) ಆದರೂ ಇಳುವರಿ ಹೆಚ್ಚಾಗಿದೆ. ಇದನ್ನು ಬಿಟ್ಟು ಬೇರೆ ಸೆಗಣಿ ಗೊಬ್ಬರ, ರಾಸಾಯನಿಕ ಗೊಬ್ಬರ ಬಳಸಿಲ್ಲ. ಕೂಲಿ ಉಳಿತಾಯವಾಗಿದೆ. ಗೊಬ್ಬರ ಹಾಕುವುದು ಸುಲಭ. ಯೋಗ್ಯ ಹಾಗೂ ಪರ್ಯಾಯ ಗೊಬ್ಬರವಾಗಿದೆ. ಗೊಬ್ಬರದ ಬಗ್ಗೆ ತುಂಬಾ ಖುಷಿ ಇದೆ.

ಶ್ರೀ ಜಿ.ಎಮ್.ಹೆಗಡೆ ಶಿಂಗನಳ್ಳಿ, ಹುಲೇಕಲ್ ಸಿರಸಿ (ಉ.ಕ.) ಮೊ: 9900429490

ನಾನು ಸಿರಿಕಮಲ ಇಂಡಸ್ಟ್ರಿಯ ಕಮಲಾಕರಭಟ್ ತಯಾರಿಸುವ ಸಾವಯವ ಗೊಬ್ಬರವನ್ನು (ಶ್ರೀಕಮಲ ಮತ್ತು ಮಿಶ್ರಸಂಜೀವಿನಿ) ನನ್ನ ಅಡಿಕೆ ತೋಟದ ಆಡಿಕೆ, ತೆಂಗು, ಮೆಣಸು, ಏಲಕ್ಕಿ ಮತ್ತು ಬಾಳೇಗಿಡಗಳಿಗೆ ಕಳೆದ 10 ವರ್ಷಗಳಿಂದ ನಿರಂತರವಾಗಿ ಬಳಸುತ್ತಿದ್ದೇನೆ. ಈ ಎಲ್ಲಾ ಬೆಳೆಗಳಲ್ಲೂ ಉತ್ತಮ ಇಳುವರಿ ಕಂಡಿದ್ದೇನೆ. ನನ್ನ ತೋಟಕ್ಕೆ 10 ವರ್ಷಗಳಿಂದ ಬೇರೆ ಯಾವುದೇ ಸಾವಯವ ಅಥವಾ ರಾಸಾಯನಿಕ ಗೊಬ್ಬರ ಹಾಕಲಿಲ್ಲ. ನನ್ನ ಅನುಭವಗಳು 1) ಅಡಿಕೆ ಮರಕ್ಕೆ ಮೂರರಿಂದ ಮೂರೂವರೆ ಕೆ.ಜಿ.ಯಂತೆ ಕೊಟ್ಟಿದ್ದೇನೆ. ವರ್ಷದಿಂದ ವರ್ಷಕ್ಕೆ ಇಳುವರಿ ಹೆಚ್ಚಾಗುತ್ತಿದೆ. 2) ಮೊದಲು ಒಂದು, ಎರಡು ಗೊನೆ ಬಿಡುತ್ತಿದ್ದ ಮರಗಳಲ್ಲಿ ಈಗ ಎರಡು ಮೂರು ಗೊನೆಗಳು ಬಿಡುತ್ತಿವೆ. 3) ತೋಟದಲ್ಲಿ ಎರೆಹುಳಗಳ ಸಂಖ್ಯೆ ಹೆಚ್ಚಾಗಿದೆ. 4) ಈ ಮೊದಲು ತೋಟಕ್ಕೆ ದಡ್ಡಿಗೊಬ್ಬರ ಹಾಕುತ್ತಿದ್ದೆ. ಕೆಲಸಗಾರರನ್ನು ಹುಡುಕಿ, ಹಿಡಿದು ಹಾಕಿಸಬೇಕಿತ್ತು. ಈಗ ನಾನು ನನ್ನ ಹೆಂಡತಿ ಸೇರಿಕೊಂಡು ನಾವೇ ತೋಟಕ್ಕೆ ಇವರ ಗೊಬ್ಬರವನ್ನು ಭಾನುವಾರದ ರಜಾ ದಿವಸದಲ್ಲಿ ಹಾಕಿಕೊಳ್ಳುತ್ತೇವೆ. 4) ತೋಟದಲ್ಲಿರುವ ಬಾಳೆಗೊನೆಗಳಲ್ಲಿ ಮೊದಲೆಲ್ಲಾ ಜಿಕ್ಕು ಗೊನೆ ಬರುತ್ತಿತ್ತು. ಈಗ ಇವರ ಗೊಬ್ಬರ ಹಾಕಲು ಪ್ರಾರಂಭಿಸಿದ ಮೇಲೆ 15-20 ಕೆ.ಜಿ.ಯ ಗೊನೆ ಬಿಡುತ್ತಿದೆ. ನನಗೆ ಭಾನುವಾರ ತೋಟಕ್ಕೆ ಹೋಗಿಬರುವ ಪೆಟ್ರೋಲ್ ಖರ್ಚು ಬಾಳೆಗೊನೆಯಿಂದಲೇ ಬರುತ್ತದೆ. ಮತ್ತು ನಮಗೂ ತಿನ್ನಲು ಸಾವಯವದ ಬಾಳೆಹಣ್ಣುಗಳು ಲಭ್ಯವಾಗಿವೆ. 5) ಇವರು ತಯಾರಿಸುವ ಗೊಬ್ಬರದಲ್ಲಿ ಯಾವುದೇ ಕಲಬೆರಿಕೆ ಮತ್ತು ಮೋಸವಿಲ್ಲ. 6) ಅಡಿಕೆ ತೋಟಕ್ಕೆ ಇವರ ಗೊಬ್ಬರವು ದಡ್ಡಿಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಕ್ಕೆ ಒಂದು ಯಶಸ್ವಿ ಪರ್ಯಾಯ ಗೊಬ್ಬರವಾಗಿದೆ. 7) ಇವರ ಗೊಬ್ಬರದಲ್ಲಿ ರೋಗ ನಿರೋಧಕ ಶಕ್ತಿ ಇದೆ.

ಎನ್.ಎನ್. ಹೆಗಡೆ ಕೃಷಿಭಾರತಿ ನರ್ಸರಿ, ಸಿರಸಿ ಐ.ಎಸ್.ಎಸ್ ರಸ್ತೆ, ಮೊ: 08384-227864,
ಸುಮಾರು 18 ವರ್ಷಗಳಿಂದ

ಕಮಲಾಕರ ಭಟರು ತಯಾರಿಸುತ್ತಿರುವ ಎರೆಹುಳು ಗೊಬ್ಬರವನ್ನು ನನ್ನ ನರ್ಸರಿ ಗಿಡಗಳಿಗೆ ಉಪಯೋಗಿಸಿದ್ದೇನೆ. ಮತ್ತು ಸಾವಿರಾರು ಜನರಿಗೆ ಮಾವಿನ ಗಿಡಗಳಿಗೆ ಮತ್ತು ತರಕಾರಿ ಗಿಡಗಳಿಗೆ ಬಳಕೆಗಾಗಿ ಮಾರಾಟಮಾಡಿದ್ದೇನೆ. ನಿಜಕ್ಕೂ ಗೊಬ್ಬರ ತುಂಬಾ ಉತ್ತಮವಾಗಿದೆ. ಕುಂಡ, ಹೂವಿನಗಿಡ, ತರಕಾರಿಗಿಡಗಳಿಗೆ ಬಳಸಿದವರು ಗೊಬ್ಬರವನ್ನು ಮೆಚ್ಚಿಕೊಂಡು ನಿರಂತರವಾಗಿ ಬಳಸುತ್ತಿದ್ದಾರೆ.

ಕಮಲಾಕರ ಚಿ. ಹೆಗಡೆ ಅರ್ಪಿತಾ ಜನರಲ್ ಸ್ಟೋರ್ಸ್ ಕೆ. ಹೆಚ್. ಬಿ. ಕಾಲೋನಿ ಸಿರಸಿ ಮೊ: 9449994711

ಸಿರಿಕಮಲದವರು ತಯಾರಿಸುತ್ತಿರುವ ಎರೆಹುಳುಗೊಬ್ಬರ ಮತ್ತು ಸಂಜೀವಿನಿ ಗೊಬ್ಬರ (3 ಕೆ.ಜಿ. ಪ್ಯಾಕೆಟ್) ಗಳನ್ನು ಸುಮಾರು 7-8 ವರ್ಷಗಳಿಂದ ನನ್ನ ಕಿರಾಣಿ ಅಂಗಡಿಯ ಗ್ರಾಹಕರಿಗೆ ಮಾರಾಟಮಾಡಿದ್ದೇನೆ. ಒಮ್ಮೆ ಬಳಸಿದವರು ಪುನಃ ಒಯ್ಯುತ್ತಿದ್ದಾರೆ. ಗೊಬ್ಬರದ ಬಗ್ಗೆ ಒಳ್ಳೆಯ ಅಭಿಪ್ರಾಯ ಕೊಡುತ್ತಿದ್ದಾರೆ. ನಗರದಲ್ಲಿ ಮನೆ ಕಾಂಪೌಂಡ್ ನಲ್ಲಿ ಗಾರ್ಡನ್ ಕೈತೋಟ ಮಾಡುವವರಿಗೆ ಹೇಳಿಮಾಡಿಸಿದ ಗೊಬ್ಬರ ಗ್ರಾಹಕರಿಗೆ ತೃಪ್ತಿ ಇದೆ.

ಶ್ರೀಧರ ಹೆಗಡೆ, ಮ್ಯಾನೇಜರ್ ಖಾದಿ ಗ್ರಾಮೋದ್ಯೋಗ ಸಹಕಾರಿ ಸಂಘ ಸಿರಸಿ, ಮೊ: 9945758654

ಕೊಡೇಗದ್ದೆಯ ಸಿರಿಕಮಲದವರು ತಯಾರಿಸುವ ಎರೆಹುಳುಗೊಬ್ಬರವನ್ನು ಸುಮಾರು 18 ವರ್ಷಗಳಿಂದ ತಮ್ಮ ಖಾದಿ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದೇವೆ. ನಗರ ನಿವಾಸಿಗಳಿಗೆ ತಮ್ಮ ಮನೆಯಂಗಳದ ಹೂವು, ತರಕಾರಿ, ಹಣ್ಣಿನ ಗಿಡಗಳಿಗೆ, ಕೈತೋಟಕ್ಕೆ ಅತ್ಯಂತ ಯೋಗ್ಯವಾದ ಗೊಬ್ಬರ, ಸ್ವಲ್ಪ ಪ್ರಮಾಣದ ಸಗಣಿ ಗೊಬ್ಬರ ಖರೀದಿಸುವದು ತುಂಬಾ ತಾಪತ್ರಯದ ಕೆಲಸ. ಇವರ ಎರೆಹುಳು ಗೊಬ್ಬರಕ್ಕೆ ಅಂಟಿಕೊಂಡವರು ತುಂಬಾ ಋಷಿಪಡುತ್ತಾರೆ. ಹೂವಿನ ಗಿಡಗಳಿಗೆ ಬಳಸಿದಾಗ ಹೂವಿನ ಗಾತ್ರ ಮತ್ತು ಸಂಖ್ಯೆ ಹೆಚ್ಚಳವಾದ ಬಗ್ಗೆ ಪ್ರತಿಕ್ರಿಯೆ ಬಂದಿರುತ್ತದೆ. ಪ್ರಾರಂಭದಿಂದ ಇಂದಿನವರೆಗೆ ಒಂದೇ ಗುಣಮಟ್ಟ ಕಾಯ್ದುಕೊಂಡಿದ್ದಾರೆ. ಗುಣಮಟ್ಟಕ್ಕೆ ತಕ್ಕ ಬೆಲೆ ಇದೆ. ದುಬಾರಿ ಅಲ್ಲ. ಒಟ್ಟಿನಲ್ಲಿ ಕಲಬೆರಕೆ ರಹಿತವಾದ ಯೋಗ್ಯಗೊಬ್ಬರ ಹೌದು.

ಬಾಲಚಂದ್ರ ಭಟ್ ಹುಲದೇವನ ಸರ, ಶಿರಸಿ, ಮೊ. 9449371718
(7 ವರ್ಷಗಳಿಂದ)

ಸಿರಿಕಮಲ ಇಂಡಸ್ಟ್ರಿಯ ಕುರಿ ಕಮಲ ಸಂಜೀವಿನಿ ಗೊಬ್ಬರವನ್ನು 7 ವರ್ಷಗಳಿಂದ ಅಡಿಕೆ ಮತ್ತು ಬಾಳೆಗೆ ಬಳಸುತ್ತಿದ್ದೇನೆ. ಇವರ ಗೊಬ್ಬರ ಬಳಸಿದಲ್ಲಿ ಬೇರೆ ಯಾವ ಗೊಬ್ಬರವನ್ನೂ ಬಳಸಿಲ್ಲ. 7 ವರ್ಷಗಳಿಂದಲೂ ಇವರು ಉತ್ತಮ ಗುಣಮಟ್ಟ ಕಾಯ್ದುಕೊಂಡಿದ್ದಾರೆ. ಈ ಗೊಬ್ಬರ ಬಳಕೆಯಿಂದ ಉತ್ತಮ ಪರಿಣಾಮ ಕಂಡು ಬಂದಿದೆ ಇಳುವರಿ ಹೆಚ್ಚಿದೆ. ದಡ್ಡಿ ಗೊಬ್ಬರಕ್ಕೆ ಇದು ಪರ್ಯಾಯ ಗೊಬ್ಬರ ಹೌದು. ಕೂಲಿ ಉಳಿತಾಯವಾಗಿದೆ.

ಶ್ರೀ ವಿ.ಜಿ.ಭಟ್ ಬೈಲಗದ್ದೆ-ಕತಗಾಲ-ಕುಮಟಾ(ಉ.ಕ.) ಮೊ. : 08386264564
(10 ವರ್ಷಗಳಿಂದ)

ನಾನು ಕೊಡಗದ್ದೆಯ ಸಿರಿಕಮಲ ಇಂಡಸ್ಟ್ರಿಯ ಕಮಲಾಕರ್ ಭಟ್ ತಯಾರಿಸುತ್ತಿರುವ ಸಾವಯವ ಗೊಬ್ಬರ (ಶ್ರೀಕಮಲ, ಕಹಿಕಮಲ ಮತ್ತು ಸಂಜೀವಿನಿ ಡೀಲಕ್ಷ್ಯಗಳನ್ನು ಕಳೆದ 10 ವರ್ಷಗಳಿಂದ ಬಳಸುತ್ತಿದ್ದೇನೆ. ನಾನು ಅಡಿಕೆ ಮತ್ತು ವಿಳ್ಳೆದೆಲೆಗೆ ಬಳಸಿದ್ದು, ಅಡಿಕೆ ತೋಟಕ್ಕೆ ಇವರು ತಯಾರಿಸುವ ಗೊಬ್ಬರವು ಒಂದು ಉತ್ತಮವಾದ ಸಾವಯವ ಗೊಬ್ಬರವಾಗಿದೆ. ವಿಳ್ಳೆದೆಲೆಗಂತು ಈ ಗೊಬ್ಬರ ಹಾಕಿದಾಗ 2 ವರ್ಷಗಳ ಬೆಳವಣಿಗೆಯು ಒಂದೇ ವರ್ಷದಲ್ಲಿ ಕಂಡುಬಂದಿದೆ. ಇವರು ತಯಾರಿಸುವ ಗೊಬ್ಬರದಲ್ಲಿ ಯಾವುದೇ ಕಲಬೆರಿಕೆ ಅಥವಾ ಮೋಸ ಇಲ್ಲ ಎಂದು ನಾನು ಖಾತ್ರಿಯಿಂದ ಹೇಳಬಲ್ಲೆ. ಅಲ್ಲದೆ ತೋಟಕ್ಕೆ ಗೊಬ್ಬರ ನೀಡುವುದು ಸುಲಭ ಮತ್ತು ಕೂಲಿ ಉಳಿತಾಯವಾಗುತ್ತದೆ.

ಸುಬ್ಬಾ ತಿಮ್ಯಾಗೌಡ ಗುಡೇಸಿರಗೋಡು- ಹೇರೂರು, ಸಿದ್ದಾಪುರ ಮೊ.: 08389 296046

ರೈತನಾಗಿರುವ ನಾನು ಕೊನೆಗೌಡ ಸಹ ಹೌದು. ಹುಲದೇವನಸರದ ಬಾಲಚಂದ್ರ ಭಟ್ಟರ ಮನೆಯ ಕೊನೆಗೌಡ ನಾನೇ. ಅವರ ಅಡಿಕೆ ತೋಟ ಅಷ್ಟೇನೂ ಚೆನ್ನಾಗಿರಲಿಲ್ಲ. ಸ್ವಲ್ಪ ಸದರೆ ಇತ್ತು. ಯಾರೋ ಹೇಳಿದರೆಂದು ಕೊಡೆಗದ್ದೆಯ ಭಟ್ಟರು ತಯಾರಿಸಿದ ಗೊಬ್ಬರ ತಂದು ಹಾಕಿದರು. ಮರು ವರ್ಷವೇ ತೋಟದ ಚಹರೆಯೇ ಬದಲಾಗಿತ್ತು. ಮುಂದಿನ ವರ್ಷ ತೋಟ ತುಂಬಾ ಚೆನ್ನಾಗಿ ಬದಲಾವಣೆ ಆಯಿತು. ಕೊನೆ ಕೊಯ್ಯುವಾಗ ತೋಟ ಬದಲಾಗಿ ಇಳುವರಿ ಹೆಚ್ಚಾಗಿದ್ದನ್ನು ಸ್ಪಷ್ಟವಾಗಿ ಗುರುತಿಸಿದೆ. ಈ ಬದಲಾವಣೆಗೆ ಅವರು ಹಾಕಿದ ಗೊಬ್ಬರವೇ ಕಾರಣವೆಂದು ನಾನು ತಿಳಿದುಕೊಂಡೆ. ಹಾಗಾಗಿ ನಾನು ಕೂಡ ಕೊಡೆಗದ್ದೆಯಿಂದ ಸಂಜೀವಿನಿ ಡಿಲಕ್ಸ್ ಗೊಬ್ಬರ ತಂದು ನನ್ನ ತೋಟಕ್ಕೆ 6 ವರ್ಷಗಳಿಂದ ಹಾಕುತ್ತಿದ್ದೇನೆ. ಮರಕ್ಕೆ 3 ಕೆಜಿಯಂತೆ ಬಳಸಿದ್ದು ಬೇರೆ ಯಾವುದೇ ಗೊಬ್ಬರ ಹಾಕಿಲ್ಲ. ವರ್ಷದಿಂದ ವರ್ಷಕ್ಕೆ ಇಳುವರಿ ಹೆಚ್ಚಾಗುತ್ತಿದೆ. ಅಡಿಕೆ ತೋಟಕ್ಕೆ ನಿಜವಾಗಿ ಉತ್ತಮವಾದ ಗೊಬ್ಬರ ಹೌದು.